“ದೀಕ್ಷಾ ಭೂಮಿ “ಯಾತ್ರಾರ್ಥಿಗಳಿಗೆ ಅರ್ಜಿ ಆಹ್ವಾನ First Come First Serve..
ಇಂಡಿ : 2022-23 ನೇ ಸಾಲಿನ ಪರಿಶಿಷ್ಟ (ಎಸಿ) ಗುಂಪಿನ ಡಾ. ಬಿ. ಆರ್. ಅಂಬೇಡ್ಕರರ ಅನುಯಾಯಿಗಳು ರಾಜ್ಯದಿಂದ ದಿನಾಂಕ ೦೩/೧೦/೨೦೨೨ ರಿಂದ ೦೫ /೧೦/೨೦೨೨ರ ವರಗೆ ನಾಗಪುರ ದೀಕ್ಷಾ ಭೂಮಿಗೆ ಬೇಟಿ ನೀಡಲು ಯಾತ್ರಾರ್ಥಿಗಳಿಗೆ ಆನ್ಲೈನ್ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ sw.kar.nic.in ನಲ್ಲಿ ದಿನಾಂಕ 16/09/2022 ರಿಂದ 26/09/2022_ ರ ವರೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಆಯ್ಕೆಯಾಗಿ ದೀಕ್ಷಾ ಭೂಮಿಗೆ ಬೇಟಿ ನೀಡುವ ಅನುಯಾಯಿಗಳಿಗೆ ತಲಾ 5 ಸಾವಿರ ರೂಪಾಯಿ ಮಾತ್ರ ಪ್ರೊತ್ಸಾಹ ಧನ ನೀಡಲಾಗುವುದು ಎಂದು ಇಂಡಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಿ.ಜೆ ಇಂಡಿ ಯವರು ಪತ್ರಿಕೆ ಮಾಹಿತಿ ನೀಡಿದರು.