ಎಬಿವಿಪಿ ಕಾರ್ಯಕರ್ತರಿಂದ ಧಾನಮ್ಮದೇವಿ ದೇವಸ್ಥಾನ ಸ್ವಚ್ಚತಾ ಕಾರ್ಯ
ಇಂಡಿ : ನಮಗೆಲ್ಲಾ ತಿಳಿದಿರುವಂತೆ ಸ್ವಚ್ಛತೆ, ನೈರ್ಮಲ್ಯ ಹಾಗೂ ಆರೋಗ್ಯ ಇವುಗಳ ನಡುವೆ ಪರಸ್ಪರ ಆಳವಾದ ಸಂಬಂಧವಿದೆ. ಸಾಮಾನ್ಯವಾಗಿ ಕೆಲವೊಂದು ಸಾಂಕ್ರಾಮಿಕ ರೋಗಗಳು ಸ್ವಚ್ಛತೆ ಇಲ್ಲದ ಕಾರಣದಿಂದ ಹರಡುತ್ತದೆ. “ಸ್ವಚ್ಛತೆ ಸ್ವಾತಂತ್ರ್ಯಕ್ಕಿಂತಲೂ ಶ್ರೇಷ್ಠ ಮತ್ತು ಬಹುಮುಖ್ಯ” ಎಂದು ಎಬಿವಿಪಿ ನಗರ ಕಾರ್ಯದರ್ಶಿ ಗಣೇಶ್ ಹಂಜಗಿ
ಹೇಳಿದರು.
ನಗರದಲ್ಲಿ ಎಬಿವಿಪಿ ಇಂಡಿ ಶಾಖೆಯ ಎಸ್ ಎಫ್ ಡಿ ವತಿಯಿಂದ, ವಿಧ್ಯಾರ್ಥಿ ಹಾಗೂ ಎಬಿವಿಪಿ ಕಾರ್ಯಕರ್ತರ ಸೇವಾ ಮನೋಭಾವನೆ ಮೂಡಿಸುವ ದೃಷ್ಟಿಯಿಂದ ಶ್ರೀ ಧಾನಮ್ಮದೇವಿ ದೇವಸ್ಥಾನ ಸ್ವಚ್ಚತಾ ಕಾರ್ಯ ನಿರ್ವಹಿಸಿ ಮಾತನಾಡಿದರು.
ಶುಚಿತ್ವದ ಕುರಿತು ಮಹಾತ್ಮ ಗಾಂಧೀಜಿಯವರ ಧ್ಯೇಯ ವಾಕ್ಯವಾಗಿತ್ತು. ಅವರ ಆಶಯದಂತೆ ನಮ್ಮ ಗ್ರಾಮೀಣ ಜನರು ಆರೋಗ್ಯವಂತರಾಗಿ ಸದೃಢರಾಗಿ ಸಶಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕೆಂದರೆ ಸ್ವಚ್ಛತೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ರಾಜ್ಯವು ಸ್ವಚ್ಛ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಿ ಸುಸ್ಥಿರ ಅಭಿವೃದ್ಧಿಯತ್ತ ಸಾಗುತ್ತಾ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸೋಣ. ಅದಲ್ಲದೇ ವಿಧ್ಯಾರ್ಥಿಗಳು ಎಬಿವಿಪಿ ಕಾರ್ಯಕರ್ತರು ಸಾರ್ವಜನಿಕ ಹಾಗೂ ದೇಶ ಸೇವೆಯಲ್ಲಿ ಸದಾಮುಂಚೂಣಿಯಲ್ಲಿರಬೇಕು.ಅದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಹುಲ್ ಜಾದವ್,
ಮಂಜುನಾಥ್ ಪೂಜಾರಿ, ಮಾಳಸಿದ್ದ, ತೇಜಸ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.