ಲಿಂಗಸೂಗೂರು: ಬಿಟ್ಟು ಬಿಡದೇ ಸುರಿಯುತ್ತಿರುವ ಮಹಾ ಮಳೆಗೆ ಮನೆಯ ಮೆಲ್ಚಾವಣಿ ಕುಸಿದು ಬಿದ್ದ ಘಟನೆ ನಡೆದಿದೆ. ತಾಲೂಕಿನ ನಾಗರಹಾಳ ಗ್ರಾಮದ 1 ವಾರ್ಡಿನ ನಿವಾಸಿಯಾದ ಸೈಯದ್ ಅಲ್ತಾಫ್ ಫೀರಾ ಎನ್ನುವವರ ಮನೆ ರಾತ್ರಿ ಕುಸಿದು ಬಿದ್ದಿದೆ.
ಮನೆಯಲ್ಲಿ ಮಲಗಿದ್ದ ಕುಟುಂಬದ ಸದಸ್ಯರು ಮನೆ ಬೀಳುತ್ತಿದ್ದಂತೆ ಎಚ್ಚರಗೊಂಡಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನು ಮನೆ ಬಿದ್ದ ಹಿನ್ನಲೆಯಲ್ಲಿ ಸೈಯದ್ ಕುಟುಂಬಸ್ಥರು ಕಂಗಾಲಾಗಿದ್ದು ಸರ್ಕಾರದ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.