ತಾಂಬಾ ಗ್ರಾಮದಲ್ಲಿ ಮೂಲಭೂತಸೌಕರ್ಯ ವಂಚಿತ ಹಾಗೂ ಜೆಜೆಎಂ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ
ಇಂಡಿ : ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳು ಗ್ರಾಮದಲ್ಲಿ ತೀವ್ರವಾಗಿ ಕಾಡುತ್ತಿವೆ. ಅದಲ್ಲದೇ ಜೆಜೆಎಮ್ ಯೋಜನೆ ಕಾಮಗಾರಿಯಿಂದ ಗ್ರಾಮದ ಓಣಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಆದ್ದರಿಂದ ಮಕ್ಕಳು, ವಯೋವೃದ್ದರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಆ ಕಾರಣಕ್ಕಾಗಿ ಈ ಎಲ್ಲಾ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಹಡಲಸಂಗ ಅವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಬುಧವಾರ ತಾಲ್ಲೂಕಿನ ತಾಂಬಾ ಗ್ರಾಮದ ಪಂಚಾಯತ್ ಕಛೇರಿ ಮುಂಭಾಗದಲ್ಲಿ ಪ್ರತಿಭಟಿಸಿ ತದನಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕರವೇ ಅಧ್ಯಕ್ಷ ಅಲ್ಲಾಭಕ್ಷ ದಡೇದ ಮಾತನಾಡಿ, ವಾರ್ಡ4 ಮತ್ತು 6 ರಲ್ಲಿ ಕುಡಿಯುವ ನೀರು ಸೇರಿದಂತೆ ಚರಂಡಿ ಹಾಗೂ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಗಂಭೀರ ಸಮಸ್ಯೆ ಗ್ರಾಮದ ಜನರು ಪ್ರತಿನಿತ್ಯ ನೋವು ಅನುಭವಿಸುತ್ತಿದ್ದಾರೆ. ಓಣಿಯಲ್ಲಿ ನಡೆದಿರುವ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಈ ಕುರಿತು ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಅದಲ್ಲದೆ ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯತ್ ಸದಸ್ಯರ,ಅಧ್ಯಕ್ಷರ ಹಾಗೂ ಪಿಡಿಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಯಾಗಿಲ್ಲ ಎಂದು ಆರೋಪಿಸಿ ಮಾತನಾಡಿದರು. ಕೂಡಲೇ ಕಳಪೆ ಕಾಮಗಾರಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಮೇಲ್ದಾಕಾರಿಗಳು ತನಿಖೆ ಮಾಡಬೇಕು. ಗ್ರಾಮದಲ್ಲಿ ಆದಷ್ಟು ಬೇಗನೆ ಜೆಜೆಎಂ ಕಾಮಗಾರಿ ಮಾಡುತ್ತಿರುವ ವಾರ್ಡಗಳಲ್ಲಿ ಸಿ.ಸಿ ರಸ್ತೆಯನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂದೆ ಅನಾಹೊತಗಳಿಗೆ ಗ್ರಾಪಂ ಆಡಳಿತ ಮಂಡಳಿ ಮತ್ತು ಗುತ್ತಗೆದಾರ ನೇರ ಹೋಣೆಗಾರರು. ಸಿಸಿ ರಸ್ತೆ, ಪೈಪಲೈನ್, ಕುಡಿಯುವ ನೀರಿನ ವ್ಯವಸ್ಥೆ ಆದಷ್ಟು ಬೇಗನೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಮಾತನಾಡಿದರು.
ಇನ್ನೂ ಕರವೇ ಗ್ರಾಮ ಘಟಕದ ಅಧ್ಯಕ್ಷ ಶಿವರಾಜ ಕೆಂಗನಾಳ ಮಾತನಾಡಿ ಗ್ರಾಮದ ಎಲ್ಲಾ ಭಾಗಗಲ್ಲಿ ಈ ಇಂತಹ ಕೆಟ್ಟ ಸಮಸ್ಯೆಗಳು ಇವೆ. ಗುಣಮಟ್ಟದ ಕಾಮಗಾರಿ ಮಾಡಿ ಪಾದಚಾರಿಗಳಿಗೆ, ದ್ವಿಚಕ್ರ ಸರ್ವಾರರಿಗೆ,ರೈತ ಬಂಡಿಗಳಿಗೆ ತೀರಗಾಡಲು ತೊಂದರೆ ಆಗದಂತೆ ಸರಿಪಡಿಸಬೇಕಾಗಿದೆ. ನಿರ್ಲಕ್ಷ್ಯ ವಹಿಸಿದ್ದರೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಈ ಸಂದರ್ಭದಲ್ಲಿ ರಜಾಕ ಚಿಕ್ಕಗಸಿ, ಅಸ್ಪಾಕ ನಾಗಾವಿ, ರಿಯಾಜ ಮಂಗಳಬೇಡೆ, ವಸೀಮ ಮಕಾನಂದರ, ಸಾಹೀಲ ಗೌಂಡಿ, ಮುನ್ನಾ ನಾರಾಯಣಪೂರ, ಅಸ್ಪಾಕ ಉಜನಿ, ಆರೀಫ ಧಡೇದ, ಮುಜಮ್ಮಿಲ ಚಡಚಣಕರ, ಸುಲೇಮಾನ ಗೌಂಡಿ, ಅಕ್ಬರ ಸುತ್ತಾರ, ತೊಶಿಫ ಸುತ್ತಾರ, ದಾವಲಸಾಬ ಇನಾಮದಾರ, ಆದೀಲ ಉಜನಿ, ಹುಸಮಾನ ಕುಡಗಿ, ಫಯಾಜ ಮಕಾನಂದಾರ, ಇಸಾಕ ಮೋಮಿನ, ಹಾಗೂ ಅನೇಕ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಗುತ್ತಗೆದಾರನ ಜೊತೆ ಮಾತನಾಡಿ ಆದಷ್ಟು ಬೇಗನೆ ಕಾಮಗಾರಿ ಮಾಡಲು ನಿರ್ದೇಶನವನ್ನು ಮಾಡುತ್ತನೆ ಹಾಗೂ ಸಂಭಂದಪಟ್ಟ ಅಧಿಕಾರಿ ಜೊತೆ ಚರ್ಚೆಮಾಡಿ ಗುಣಮಟ್ಟದ ಕಾಮಗಾರಿ ಮಾಡಲು ಹೇಳುತ್ತೆನೆ ಎಂದು ಪಿಡಿಓ ಶ್ರೀಕಾಂತ ಹಡಲಸಂಗ ಹೇಳಿದರು.