ಸಿಂದಗಿ ಜನಾಭಿಪ್ರಾಯ ಸಭೆ; ಉಪವಿಭಾಗಾಧಿಕಾರಿಗೆ ಮನವಿ
ಸಿಂದಗಿ: ಸಿಂದಗಿ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಜನಶಕ್ತಿ ಪ್ರದರ್ಶನ, ಜನಾಂದೋಲನ ಪ್ರಾರಂಭ- ಗೊಳ್ಳಬೇಕು. ಜನವರಿ 5ರೊಳಗಾಗಿ ಮತಕ್ಷೇತ್ರದ ಶಾಸಕರನ್ನೊಳಗೊಂಡ ಐದು ಜನರ ನಿಯೋಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿಂದಗಿ ಜಿಲ್ಲೆ ಪ್ರಸ್ತಾವ ಸಲ್ಲಿಸಲಾಗು ವುದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ತಿಳಿಸಿದರು.
ಹೌದು ಶುಕ್ರವಾರ ಸಿಂದಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಾಯಂಕಾಲ 5 ಘಂಟೆಗೆ ಇಂಡಿ ಜಿಲ್ಲಾ ಸೃಜಿಸಲು ಆಯೋಜಿಸಿರುವ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯನ್ನು ವಿಭಜನೆ ಮಾಡುವುದಾದರೆ ಸಿಂದಗಿಯನ್ನೇ ಜಿಲ್ಲೆಯನ್ನಾಗಿ ರಚನೆ ಮಾಡಬೇಕು ಎಂದು ಆಗ್ರಹಿಸಿ ಶಾಸಕ -ಅಶೋಕ ಮನಗೂಳಿ ನೇತೃತ್ವದಲ್ಲಿ ರಮೇಶ ಭೂಸನೂರ, ಶಹಾಪೂರ ಸರ್ಕಾರದ ಪ್ರತಿನಿಧಿಯಾದ – ಇಂಡಿ ಉಪವಿಭಾಗಾಧಿಕಾರಿ -ಅಬೀದ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಸಿಂದಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಜನಾಭಿಪ್ರಾಯ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ನೇತೃತ್ವದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಅರುಣ ಶಹಾಪೂರ ಅವರು ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅವರಿಗೆ ಮನವಿ ಸಲ್ಲಿಸಿ ಸಿಂದಗಿಯನ್ನು ಜಿಲ್ಲೆಯನ್ನಾಗಿ ರಚನೆ ಮಾಡುವಂತೆ ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಸಿಂದಗಿ ಜಿಲ್ಲೆಯಾಗಿಸಲು ಜಿಲ್ಲಾಡಳಿತ ಕಟ್ಟಡಗಳಿಗೆ ಜಾಗದ ಅಗತ್ಯ ಬಿದ್ದರೆ 8 ಎಕರೆ ಜಮೀನು ನೀಡಲಾಗುವುದು. ಅಗತ್ಯ ಸೌಲಭ್ಯ ಒದಗಿಸಲು ಹಣದ ಅಗತ್ಯತೆ ಬಿದ್ದಲ್ಲಿ ಸಾರ್ವಜನಿ ಕವಾಗಿ ಹಣ ಸಂಗ್ರಹಣೆ ಮಾಡಲಾಗುವುದು ಎಂದು ತಿಳಿಸಿದರು.
ಶೀಘ್ರದಲ್ಲಿಯೇ ನಿಯೋಗವು ಸರ್ಕಾರಕ್ಕೆ ಮನವರಿಕೆ ಮಾಡಲಿದೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಅರುಣ ಶಹಾಪೂರ ಅವರು ಶಾಸಕ ಮನಗೂಳಿಯವರ ನೇತೃತ್ವದಲ್ಲಿ ಸಿಂದಗಿ ಜಿಲ್ಲಾ ಹೋರಾಟದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಜನಾಭಿಪ್ರಾಯ ಸಂಗ್ರಹದಲ್ಲಿ ವಕೀಲರ ಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಾಹಿತಿಗಳು, ಸಂಘಟನೆಗಳು, ಮಹಿಳೆಯರು, ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ 20ಕ್ಕೂ ಅಧಿಕ ಲಿಖಿತ ಮನವಿ ಜಿಲ್ಲೆ ಸೃಜನೆಗೆ ಒತ್ತಾಯಿಸಿದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಸಿಪಿಐ ಡಿ.ಹುಲುಗಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ ಉಪಸ್ಥಿತರಿದ್ದರು