ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಲು ಆಗ್ರಹ..!
ಇಂಡಿ : ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ಅನುಮಾನಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಅವರು ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಿಕಾ ಮಾದ್ಯಮದ ಮೂಲಕ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲು ಒತ್ತಾಯ ಮಾಡುತ್ತೆವೆ ಎಂದು ಬುಧವಾರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಸುಮಾರು ವರ್ಷಗಳ ಪ.ಪಂ ಮೀಸಲಾತಿಗಾಗಿ ಅನೇಕ ರೀತಿಯಲ್ಲಿ ತಳವಾರ & ಪರಿವಾರ ಸಮುದಾಯ ಹೋರಾಟ, ಪ್ರತಿಭಟನೆ ಮಾಡಿದ್ರೂ ಯಾರೂ ನ್ಯಾಯ ಕೊಡಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ನುಡಿದಂತೆ ನಡೆದು ಈ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೋಷಿತ ಸಮುದಾಯ ಬಗ್ಗೆ ಇರುವ ಕಾಳಜಿ ಅರ್ಥವಾಗುತ್ತೆ. ಸಂಸದ ಪ್ರತಾಪ ಸಿಂಹ ಅವರು ಒಂದು ಸಂಘಟನೆ ಮತ್ತು ಒಂದು ಪಕ್ಷ ಅಥವಾ ಸಿದ್ಧಾಂತ ನಿಷ್ಟಾವಂತ ವ್ಯಕ್ತಿ ಅಲ್ಲದೆ ಬದಲಾವಣೆ, ಬೆಳವಣಿಗೆ, ಕಾರ್ಯ ವೈಖರಿ, ಪರಿಶ್ರಮ ಜೀವಿ, ಎಂದು ಹೆಸರು ಮಾಡಿರುವ ಒಬ್ಬ ಹೆಮ್ಮೆಯ ಕರ್ನಾಟಕ ಸಂಸದ, ಸುಮಾರು 10 ವರ್ಷಗಳಲ್ಲಿ ಮೈಸೂರಿಗೆ ಒಬ್ಬ ಸಂಸದ ಕೇಂದ್ರದಿಂದ ಅತ್ಯಂತ ದೊಡ್ಡ ಪ್ರಮಾಣದ ನಿಧಿ ತರುವ ಹಾಗೂ ಹತ್ತಾರು ಯೋಜನೆಗಳನ್ನು ತರುವ ಮೂಲಕ ಕರ್ನಾಟಕ ಸಂಸದರಿಗೆ ನಿಬ್ಬೆರಗಾಗುವಂತೆ ಮಾಡಿರುವ ವ್ಯಕ್ತಿ ಸಂಸದ ಪ್ರತಾಪ ಸಿಂಹ, ಇನ್ನೂ ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿ, ಐತಿಹಾಸಿಕ ಮೈಸೂರು ಜಿಲ್ಲೆಗೆ 13 ರೈಲುಗಳು ಪ್ರಯಾಣ ಬೆಳೆಸುವಂತೆ ಮಾಡಿರುವ ಕೀರ್ತಿ ಸಂಸದರಿಗೆ ಸಲ್ಲುತ್ತದೆ, ಅದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ, ರಾಜಕೀಯ ಮಾಡುವವರ ರಾಜಕಾರಣಿಗಳ ಮಧ್ಯೆ, ಸಮಾಜಿಕ ಮತ್ತು ಅಭಿವೃದ್ಧಿ ಪ್ರಗತಿಯ ಕೆಲಸ ಕಾರ್ಯ ಮಾಡಿರುವ ಹೃದಯವಂತ, ರಾಜ್ಯದಲ್ಲಿ ಒಂದು ಪ್ರಬಲವಾದ ಸಮುದಾಯದಲ್ಲಿ ಹುಟ್ಟಿದರು ಜಾತಿ ರಾಜಕೀಯ ಮಾಡದ ರಾಜಕಾರಣಿ, ಬಿಜೆಪಿ ಪಕ್ಷದ ಪ್ರಧಾನಿಯ ಗುರಿ, ಇಚ್ಛೆ, ಕನಸು ನನಸು ಮಾಡಿರುವ ಕರ್ನಾಟಕದ ಒಬ್ಬ ಸಂಸದ ಎಂದರೇ ತಪ್ಪೇನಿಲ್ಲ. ಈಗಾಗಲೇ ಕರ್ನಾಟಕದ ಜನತೆಯ ಪ್ರತಿ ಮಾತಲ್ಲಿ ಈ ರೀತಿಯ ಸಂಸದ ನಮಗೆ ಬೇಕು ಎಂದು ಎಷ್ಟೋ ಜನರ ಬಾಯಲ್ಲಿ ಕೇಳಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯ. ಹಾಗಾಗಿ ಇಂತಹ ” ಯಂಗ್ ಲೀಡರ್, ಫಯರ್ ಬ್ರಾಂಡ್ ಯುವಕರಿಗೆ ಮಾದರಿಯಾಗಿರುವ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡಲು ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಟಿಕೇಟ್ ನೀಡದೆ, ಪ್ರತಾಪ್ ಸಿಂಹ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ರಾಷ್ಟ್ರ ಭಕ್ತರಿಗೆ ಹಾಗೂ ಈ ಸಮುದಾಯದ ಹಾಗೂ ಸಂಘದ ಯುವಕರಿಗೆ ನಿರಾಸೆ, ನೋವು ವಿಚಾರ ಮಾಡಿದ್ದಲ್ಲಿ. ನಾವು ಕೂಡಾ ಖಡಾಖಂಡಿತವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರಾಸೆ ಮೂಡಿಸುವದರಲ್ಲಿ ಸಂಶಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತೆವೆ.
ಈ ಸಂದರ್ಬದಲ್ಲಿ ತಾ.ಪಂ ಸದಸ್ಯ ಸಿದ್ದಪ್ಪ ತಳವಾರ, ನ್ಯಾಯವಾದಿ ಎಸ್ ಬಿ ಕೆಂಬೊಗಿ, ಡಾ. ಸುರೇಶ್ ವಿಜಯಪುರ, ಶಂಕರಲಿಂಗ ಜಮಾದಾರ, ಗ್ರಾ.ಪಂ ಮಾಜಿ ಸದಸ್ಯ ಬಿ.ಟಿ, ನಾಯಕೋಡಿ, ದ್ಯಾಮಣ್ಯ ಜಮಾದಾರ, ಸೋಮು ಜಮಾದಾರ, ಮಲ್ಲಿಕಾರ್ಜುನ ಹೋರ್ತಿ, ನಿಂಗಪ್ಪ ತಿಳಗೋಳ, ಶಿವಶರಣ ನಾಟೀಕಾರ, ಸುರೇಶ ತಳವಾರ, ಸುರೇಶ ಡೊಂಗೊಜ್, ಈರಣ್ಯ ಕೋಳಿ (ಹಡಲಸಂಗ) ರವಿ ರಾಯಜಿ, ಸಂತೋಷ ಕೋಳಿ, ಸುನೀಲ ವಾಲಿಕಾರ, ಕಾಶಿನಾಥ ನಾಯಕೋಡಿ, ಚಂದ್ರು ತಳವಾರ, ಬಸವರಾಜ ನಾಯಕೋಡಿ, ರೇವಣ್ಣ ಹತ್ತಳ್ಳಿ, ರಾಮಚಂದ್ರ ಕೋಳಿ, ವಿಶ್ವನಾಥ ಮಣಗಿರಿ,ಶಿವರಾಯ ಕೋಳಿ, ಸೋಮು ಕೋಳಿ ಉಪಸ್ಥಿತರಿದ್ದರು.