ಅಫಜಲಪುರ: ತಾಲ್ಲೂಕಿನ ಜೇವರ್ಗಿ ಬಿ ಗ್ರಾಮದ ರೈತರಿಗೆ ಕೃಷಿ ಬಳಕೆಗೆಂದು ವಿತರಿಸಿದ ಪೈಪಗಳು ತೀರಾ ಕಳಪೆಯಾಗಿವೆ. ಕೈಯಿಂದ ಮುರಿಯುವಷ್ಟು ದುರ್ಬಲವಾಗಿವೆ ಎಂದು ರೈತರು ಆರೋಪಿಸಿದರು. ಸಬ್ಸಿಡಿ ಹೆಸರಲ್ಲಿ ಇಂತ ಕಳಪೆ ಪೈಪಗಳು ಪೂರೈಸಲಾಗಿದೆ. ಈ ಪೈಪುಗಳು ತಂದ ಒಂದು ದಿನ ಬಿಸಿಲಿನಲ್ಲಿ ಇಟ್ಟರೆ ಸಾಕು ಯಾವ ಪ್ರಯೋಜನೆ ಬರುವುದಿಲ್ಲ.
ಕಳೆದ ಬಾರಿ ನೀಡಿರುವ ಪೈಪುಗಳು ಸುಮಾರು ಐದು ವರ್ಷ ಬಾಳಿಕೆಗೆ ಬಂದಿವೆ. ಈ ಬಾರಿ ಪೈಪ್ ಪೂರೈಕೆದಾರರು ರೈತರಿಗೆ, ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕೂಡಲೇ ಕಳಪೆ ಪೈಪ ಪೂರೈಕೆದಾರರ ಲೈಸನ್ಸ್ ರದ್ದುಗೊಳಿಸಿ ರೈತರಿಗೆ ಆದ ನಷ್ಟ ಭರಿಸಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜೇವರ್ಗಿ ರೈತರಿಗೆ ಸಬ್ಸಿಡಿಯಲ್ಲಿ ವಿತರಿಸಿದ ಬಹುತೇಕ ಪೈಪಗಳು ಕಳಪೆಯಾಗಿವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.
ವರದಿ: ಉಮೇಶ ಅಚಲೇರಿ ಅಫಜಲಪುರ