ಶರಣರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ : ಧನಪಾಲಶೆಟ್ಟಿ ದೇವೂರ
ಇಂಡಿ: ಕಾಯಕ ಶರಣರ ಜಯಂತಿ ಸರಕಾರದ
ನಿರ್ದೇಶನ ಮತ್ತು ನಿಮ್ಮ ಸಲಹೆ ಅಭಿಪ್ರಾಯದಂತೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಗ್ರೇಡ್ 2 ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಹೇಳಿದರು.
ಅವರು ಸೋಮವಾರ ತಾಲೂಕು ಆಡಳಿತ ಸೌಧದ
ಸಭಾಭವನದಲ್ಲಿ ಆಯೋಜಿಸಿದ್ದ ವಿವಿಧ ಶರಣರ
ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ
ಮಾತನಾಡಿದರು. ಫೆ. 10 ರಂದು ಕಾಯಕ ಶರಣ ಜಯಂತಿ, ಫೆ. 15 ಸಂತ ಸೇವಾಲಾಲ ಜಯಂತಿ, ಫೆ. 16 ಸವಿತಾ ಮಹರ್ಷಿ ಜಯಂತಿ, ಫೆ. 19 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಫೆ. 20 ಸಂತ ಕವಿ ಸರ್ವಜ್ಞರ ಜಯಂತಿ ಸರಕಾರದ ನಿರ್ದೇಶನಂತೆ ಆಚರಿಸಲಾಗುತ್ತದೆ.
ಶಾಲಾ ಕಾಲೇಜು, ಸಂಘ, ಸಂಸ್ಥೆಗಳು ಮತ್ತು
ಸರಕಾರಿ ಎಲ್ಲಾ ಕಛೇರಿಗಳಲ್ಲಿ ಭಾವಚಿತ್ರಕ್ಕೆ ಪೂಜೆ
ಸಲ್ಲಿಸಿ ಜಯಂತಿ ಆಚರಿಸಿ, ತದನಂತರ 9 ಘಂಟೆಗೆ
ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಜಯಂತಿಯಲ್ಲಿ
ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲು ಹೇಳಿದರು.
ಸಮುದಾಯದ ಅಸ್ಮಿತೆಯ ಪ್ರತೀಕವಾಗಿರುವ
ಶಿವರಣರನ್ನು ಗುರುತಿಸಿ ಸರಕಾರದಿಂದ ಜಯಂತಿ
ಆಚರಣೆ ಮಾಡಲಾಗುತ್ತದೆ. ಸಮುದಾಯದ ಎಲ್ಲ
ಜನರು ಭಾಗವಹಿಸಿ ಕಾಯಕ ಶಿವಶರಣ ಜೀವನ
ಸಂದೇಶವನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸತೀಶ ಕುಂಬಾರ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ,ವಿಜಯಕುಮಾರ ರಾಠೋಡ, ಸಂಜೀವ ಚವ್ಹಾಣ ಮಾತನಾಡಿದರು. ಸಭೆಯನ್ನು ಬಸವರಾಜ ರಾವೂರ ಸ್ವಾಗಗತಿಸಿ, ನಿರೂಪಿಸಿದರು.
ಪೂರ್ವಭಾವಿ ಸಭೆಯಲ್ಲಿ ತೋಟಗಾರಿಕೆ ಹಿರಿಯ
ಸಹಾಯ ನಿರ್ದೇಶಕ ಎಚ್.ಎಸ್. ಪಾಟೀಲ್,
ಹೆಸ್ಕಾಂ ಎಇ, ಎಸ್.ಆರ್.ಮೆಡೇದಾರ, ಶಹರ ಠಾಣೆ ಪಿಎಸ್‍ಐ ರೇಣುಕಾ ಹಳ್ಳಿ, ಬಂಜಾರ ಸಮುದಾಯದ ಮುಖಂಡರಾದ ಮಲ್ಲು ರಾಠೋಡ, ಧರ್ಮಸಿಂಗ ರಾಠೋಡ, ಭೀಮು ರಾಠೋಡ, ಅಭಿಶೇಕ ರಾಠೋಡ, ಸಂಜೀವ ಪವಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂಡಿ: ಸೋಮವಾರ ತಾಲೂಕು ಆಡಳಿತ ಸೌಧದ
ಸಭಾಭವನದಲ್ಲಿ ಆಯೋಜಿಸಿದ್ದ ವಿವಿಧ ಶರಣರ
ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ
ಗ್ರೇಡ್ 2 ತಹಸೀಲ್ದಾರ ಧನಪಾಲಶೆಟ್ಟಿ ದೇವೂರ
ಮಾತನಾಡಿದರು.