ಕನ್ನಡ ಭುವನೇಶ್ವರಿ ರಥಯಾತ್ರೆಗೆ ಅದ್ದೂರಿ ಸ್ವಾಗತಕ್ಕೆ ನಿರ್ಧಾರ..!
ಇಂಡಿ : ಕರ್ನಾಟಕ ಸಂಭ್ರಮ-50ರ ನಿಮಿತ್ಯವಾಗಿ ಕನ್ನಡಾಂಬೆಯ ಜ್ಯೋತಿ ರಥಯಾತ್ರೆಯನ್ನು ಲಿಂಬೆ ನಾಡಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರ ಅಧ್ಯಕ್ಷತೆಯಲ್ಲಿ ನಿರ್ಧಾರ ಮಾಡಲಾಯಿತು.
ಭಾನುವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜ- 28 ರಂದು ಕನ್ನಡಾಂಬೆ ರಥಯಾತ್ರೆ ಆಗಮನ ಹಿನ್ನೆಲೆಯಲ್ಲಿ ಆಯೋಜಿಸಿರುವ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರು ಮಾತಾನಾಡಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯನ್ನು ಇಡೀ ರಾಜ್ಯಾದ್ಯಂತ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ. ಹಾಗಾಗಿ ನಮ್ಮ ಭಾಗದಲ್ಲೂ ವಿಶೇಷವಾಗಿ ಅದ್ದೂರಿಯಾಗಿ ನಿಮ್ಮ ಸಲಹೆ-ಸೂಚನೆ ಕನ್ನಡ ನಾಡಿಗೆ ಮೆರುಗು ತರುವಂತೆ ಅದ್ದೂರಿಯಾಗಿ ಮತ್ತು ವಿಜೃಂಭಣೆಯಿಂದ ಸ್ವಾಗತ ಕೋರುವ ವ್ಯವಸ್ಥೆ ಮಾಡಿಕೊಳ್ಳೊಣ ಎಂದು ಹೇಳಿದರು.
ಸ್ವಾಗತ ಹೇಗೆ ಇರಬೇಕು..!
ವಿಶೇಷವಾಗಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ರಥೆಯಾತ್ರೆಯಲ್ಲಿ ಪಾಲ್ಗೊಂಡು ಮೆರವಣಿಗೆ ಸಹಕಾರ ನೀಡುವರು. ಹಾಗೆ ಮಹಿಳೆಯರಿಂದ ಪೂರ್ಣ ಕುಂಭ-ಕಳಸ, ಗೊಂಬೆ ಕುಣಿತ, ಡೊಳ್ಳು ಕುಣಿತ, ಚಿಟ್ಟ ಹಲಗೆ ಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ಮತ್ತು ಕನ್ನಡ ನಾಡು ನುಡಿಯ ಗೀತೆಯೊಂದಿಗೆ ರಥಯಾತ್ರೆಯ ಮೆರವಣಿಗೆ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಥಯಾತ್ರಗೆ ಲಿಂಬೆ ಹಣ್ಣಿನ ಹೂವಿನ ಹಾರ ಹಾಕಿ ಸ್ವಾಗತ ಕೋರಬೇಕು. ಎತ್ತಿನ ಬಂಡಿಗಳು ಹಾಗೂ ಆಟೋಗಳ ಮೇಲೆ ನಾಡಿನ ಕವಿಗಳು, ವಚನಕಾರರು, ಏಕೀಕರಣದ ಹೋರಾಟಗಾರರ ವೇಷಭೂಷಣ ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆಯುವಂತ ಕಾರ್ಯಕ್ರಮಗಳು ನಡೆಯಬೇಕು ಎಂಬ ಸಲಹೆ ಕನ್ನಡ ಪರ ಸಂಘಟಕಾರರು ತಿಳಿಸಿದರು.
ಇನ್ನೂ ಅದಲ್ಲದೇ ಪಟ್ಟಣದ ರಸ್ತೆಯಲ್ಲಿ ಸಂಪೂರ್ಣ ದೂಳು ಮಣ್ಣು ತುಂಬಿದ್ದರಿಂದ ತೊಂದರೆ ಯಾಗುತ್ತೆದೆ.ಅದಕ್ಕಾಗಿ ರಸ್ತೆಯ ಮೇಲೆ ನೀರು ಚಿಮುಕಿಸಿ.ಹಾಗೂ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕನ್ನಡ ಅಭಿಮಾನಿಗಳಿಗೆ ಬಾವುಟ, ವಿಧ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ರಥಯಾತ್ರೆಯಲ್ಲಿ ಎಲ್ಲಿಂದ ಪ್ರಾರಂಭ..?
ಪಟ್ಟಣದ ಸೇವಾಲಾಲ ವೃತ್ತ ದಿಂದ ಮೆರವಣಿಗೆ ಪ್ರಾರಂಭಿಸಿ ಹೃದಯ ಭಾಗದ ಬಸವೇಶ್ವರ ವೃತ್ತದ ಮೂಲಕ ಸಾಗಿ ಜಿಲ್ಲಾ ಪಂಚಾಯತ್ ಎದುರುಗಡೆ ವಿಶೇಷವಾಗಿ ಕನ್ನಡ ನಾಡು ನುಡಿಯ ಬಗ್ಗೆ ಭಾಷಣ ನಡೆಯುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ ಸಂಘಟಕರು, ಕನ್ನಡ ಅಭಿಮಾನಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಸಲಹೆ ಮತ್ತು ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್ ಮೋಮಿನ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ, ಕರವೇ ಅಧ್ಯಕ್ಷ ಬಾಳು ಮುಳಜಿ, ಪ್ರವೀಣ ಶೇಟ್ಟಿ ಬಣದ ಕರವೇ ಅಧ್ಯಕ್ಷ ಶಿವು ಮಲಕಗೊಂಡ ಫಯಾಜ್ ಭಾಗವಾನ, ಆನಂದ ಪವಾರ,ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಮಹೇಶ ಹೂಗಾರ, ಜೆ ಡಿ ಎಸ್ ಮುಖಂಡ ಮೈಹಿಬೂಬ ಬೇವನೂರ, ನಿಯಾಜ ಅಗರಖೇಡ ಉಪಸ್ಥಿತರಿದ್ದರು.