ವಿಜಯಪುರ : ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ಕಾಶಿನಾಥ್ ಸೂಲಂಕಾರ್ ಮೃತಪಟ್ಟಿರುವ ದುರ್ದೈವಿ. ಇನ್ನು ಕಾಶಿನಾಥ ಜಮೀನಿನಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಮಳೆ ಸಮೇತ ಗುಡುಗು ಸಿಡಿಲು ಆರಂಭವಾಗಿದೆ. ಈ ವೇಳೆಯಲ್ಲಿ ಸಿಡಿಲು ಬಡಿದು ಅಸುನೀಗಿದ್ದಾರೆ. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.