ಉರ್ದು ಶಾಲೆಯನ್ನು ಅದೇ ಸ್ಥಳದಲ್ಲಿ ಪುನಾರಂಭಿಸುವಂತೆ ಆಗ್ರಹಿಸಿ ಶಾಲೆಯ ಹಳೆ ವಿದ್ಯಾರ್ಥಿಗಳು, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಸಹ ಯೋಗದಲ್ಲಿ ಬಿಇಒ ಕಾರ್ಯಾಲಯ ಎದುರು ಧರಣಿ ಸತ್ಯಾಗ್ರಹ
ಹಳೆ ವಿದ್ಯಾರ್ಥಿಗಳಿಂದ ಬಿಇಒ ಕಚೇರಿ ಎದುರು ಧರಣಿ ಡಿಡಿಪಿಐ ಭರವಸೆಗೆ ಸ್ಪಂದನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಗ್ರಾಮದೇವತೆ ಕಟ್ಟೆಯ ಹತ್ತಿರದಲ್ಲಿರುವ ಶತಮಾನ ಕಂಡಿರುವ ಬಜಾರ ಸರ್ಕಾರಿ ಉರ್ದು ಶಾಲೆಯನ್ನು ಅದೇ ಸ್ಥಳದಲ್ಲಿ ಪುನಾರಂಭಿಸುವಂತೆ ಆಗ್ರಹಿಸಿ ಶಾಲೆಯ ಹಳೆ ವಿದ್ಯಾರ್ಥಿಗಳು, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಸಹ ಯೋಗದಲ್ಲಿ ಬುಧವಾರ ಬಿಇಒ ಕಾರ್ಯಾಲಯ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಶಾಲೆಯನ್ನು ಡೈಸ್ ಕೋಡ್ ಇಲ್ಲ ಎಂದು ಸಬೂಬು ಹೇಳಿ ಬಂದ್ ಮಾಡಲಾಗಿದೆ. ಇದೇ ನೆಪದಲ್ಲಿ ಶಾಲೆಯನ್ನು ಪುರಸಭೆ ಸುಪರ್ದಿಗೆ ಹಸ್ತಾಂತರಿಸುವ ಪ್ರಯತ್ನಗಳು ನಡೆದಿವೆ. ಇದು ಕಾನೂನು ಬಾಹಿರವಾಗಿದೆ. ಹಸ್ತಾಂತರ ತಡೆದು ಮೊದಲಿದ್ದಂತೆಯೇ ಶಾಲೆ ಆರಂಭಿಸಬೇಕು. ಈ ಶಾಲೆ ಇರುವ ಜಾಗವು ದಾನಿಯೊಬ್ಬ ಭೂದಾನದಿಂದ ಸ್ಥಾಪನೆಯಾಗಿತ್ತು. ಆದ್ದರಿಂದ ಸದು ಜಾಗವು ಶಾಲೆಗೇ ಸೀಮಿತವಾಗಿದ್ದು ಶಾಲೆಯಾಗಿಯೇ ಉಳಿಯಬೇಕು ಎಂದು ಹಳೇಯ ವಿದ್ಯಾರ್ಥಿಗಳು ಆಗ್ರಹಿಸಿದರು.
ವಿಷಯ ತಿಳಿದು ಬಿಇಒ ಬಿ.ಎಸ್.ಸಾವಳಗಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಈ ವಿಷಯವನ್ನು ಈಗಾಗಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಾಗ ಆಕ್ಷೇಪಿಸಿದ ಧರಣಿ ನಿರತರು ನೀವು ಯಾವುದೇ ರೀತೀಯ ಪತ್ರಗಳ ವ್ಯವಹಾರ ಆಗಲಿ ಅಥವಾ ಮಾಹಿತಿ ಆಗಲಿ ಸಂಬಂಧಪಟ್ಟ ಆಕಾರಿಗಳಿಗೆ ನೀಡಿಲ್ಲಾ ಒಂದು ವೇಳೆ ಶಾಲೆಯನ್ನು ಇದೇ ಸ್ಥಳದಲ್ಲಿ ಆರಂಭಿಸದೇ ಹೋದರೆ ಹೋರಾಟ ಉಗ್ರಗೊಳಿಸಬೇಕಾಗುತ್ತದೆ
ಎಂದು ಎಚ್ಚರಿಕೆ ನೀಡಿದ್ದಾರೆ.
ಇದರಿಂದ ವಿಚಲಿತರಾದ ಬಿಇಓ ಅವರು ಸ್ಥಳದಿಂದಲೇ ಪ್ರಭಾರ ಡಿಡಿಪಿಐ ಟಿ.ಎಚ್. ಕೋಲಾರ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಹೋರಾಟಗಾರರ ಬೇಡಿಕೆಯನ್ನು ಅವರ ಗಮನಕ್ಕೆ ತಂದರು. ಅತ್ತ ಕಡೆಯಿಂದ ಸೂಕ್ತ
ಕ್ರಮದ ಭರವಸೆ ದೊರೆತ ನಂತರವೇ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡು ಶಾಲೆ ಪುನಾರಂಭಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಯಿತು. ಡಿಡಿಪಿಐ ತಿಳಿಸಿದಂತೆ ಶಾಲೆ ಪ್ರಾರಂಭಕ್ಕೆ ಪ್ರೊಮೋಜಲ್ ಅನ್ನು ಬಿಇಒ ಅವರು ಕೂಡಲೇ ಡಿಡಿಪಿಐ ಅವರಿಗೆ ಕಳಿಸಬೇಕು ಎಂದು ತಿಳಿಸಿದಾಗ ಬಿಇಓ. ಅವರು ಒಪ್ಪಿಗೆ ನೀಡಿದ್ದರಿಂದ ಧರಣಿ ಕೈಬಿಟ್ಟರು.
ಇದೇ ವೇಳೆ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್ ಅವರು ಮಾತನಾಡಿ ಕೊಟ್ಟ ಮಾತಿನಂತೆ ಒಂದು ವಾರದಲ್ಲಿ ಶಾಲೆ ಆರಂಭವಾಗಬೇಕು. ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ವರದಿ ಕಳಿಸಬೇಕು. ಶತಮಾನ ಕಂಡ ಶಾಲೆಯನ್ನು ಪುರಸಭೆಗೆ ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದ್ದರೆ ಅದು ದುರುದ್ದೇಶದಿಂದ ಕೂಡಿದ್ದ ತಕ್ಷಣ ಕೈಬಿಡಬೇಕು. ಈ ಶಾಲೆಯ ರಕ್ಷಣೆಗೆ ಹಳೆ ವಿದ್ಯಾರ್ಥಿಗಳಾದ ನಾವು ಯಾವುದೆ ತ್ಯಾಗಕ್ಕೂ ಸಿದ್ದರಿದ್ದೇವೆ. ಈಗಿರುವ ಜಾಗವನ್ನು ಶಾಲೆಗೆ ಮೀಸಲಿರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು. ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಲ್.ಎಂ.ನಾಯ್ಕೋಡಿ ದಾವಲ್ ಸಾತಿಹಾಳ, ರಿಯಾಜ್ ಮುಲ್ಲಾ ಫಾರೂಕ್ ಚೌಧರಿ, ಜುಬೇರ ಸಾತಿಹಾಳ, ಹುಸೇನಬಾಷಾ ಮುಲ್ಲಾ, ಇಸ್ಮಾಯಿಲ್ ಅವಟಿ, ಉರ್ದು ಶಿಕ್ಷಣ ಸಂಯೋಜಕ ಮುದ್ದೇಬಿಹಾಳ, ಬಿಇಒ ಕಚೇರಿ ಸಿಬ್ಬಂದಿ ಶರಣು ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು.