ವಿಡಿಸಿಸಿ 2024-25ನೇ ಹಾಗೂ 106ನೇ ವಾರ್ಷಿಕ ಸಭೆ-
7094 ಕೋಟಿ ರೂ. ವ್ಯವಹಾರ-25.18 ಕೋಟಿ ರೂ. ನಿವ್ವಳ ಲಾಭ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಡಿಸಿಸಿ ಕೊಡುಗೆ ಅನುಪಮ ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ
ವಿಜಯಪುರ: ನಷ್ಟದಲ್ಲಿರುವ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳಿಗೆ ನೆರವು ನೀಡಿ ಅವುಗಳ ಪುನ ಶ್ಚೇತನಕ್ಕೆ ಕಾರಣವಾದ ಹೆಗ್ಗಳಿಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸಲ್ಲುತ್ತದೆ. ಪರಿಣಾಮವೇ ಇದೀಗ ರಾಜ್ಯದಲ್ಲೇ ನಮ್ಮ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನ ಪಡೆದಿರುವುದಕ್ಕೆ ಸಾಕ್ಷಿ ಎಂದು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕಿನ 106ನೇ ವಾರ್ಷೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್8.53 ಕೋಟಿ ರೂ. ತೆರಿಗೆ ಪಾವತಿ ಬಳಿಕ 25.18 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇತಿಹಾದಲ್ಲೇ ಇದು ದಾಖಲೆ ಬರೆದಿದೆ. 106 ವರ್ಷಗಳ ಇತಿಹಾಸದಲ್ಲಿ ನಮ್ಮ ಬ್ಯಾಂಕ್ 99 ವರ್ಷಗಳಲ್ಲಿ 245.90 ಕೋಟಿ ರೂ. ಲಾಭದಲ್ಲಿ ಮುನ್ನಡೆದು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿರುವುದು ನಮ್ಮ ಬ್ಯಾಂಕಿನ ಸಾಧನೆ. 7 ವರ್ಷಗಳ 6.08 ಕೋಟಿ ರೂ. ನಷ್ಟದಿಂದ ಹೊರಬಂದು ಒಟ್ಟು 239.82 ಕೋಟಿ ರೂ. ಲಾಭ ಗಳಿಸಿದೆ. ಹೀಗಾಗಿ ಲಾಭದತ್ತ ಮುಖ ಮಾಡಿದ ಬಳಿಕ ಬ್ಯಾಂಕ್ ಮತ್ತೆ ಹಿಂತಿರುಗಿ ನೋಡುವ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.
ಅವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಹಕಾರಿ ಆಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು, ಅರ್ಬನ್ ಬ್ಯಾಂಕುಗಳು, ಪತ್ತಿನ ಸಹಕಾರಿ ಸಂಘಗಳು, ಹಾಲು ಒಕ್ಕೂಟಗಳು ನಷ್ಟದಲ್ಲಿದ್ದವು. ನಷ್ಟದಲ್ಲಿ ಇಂಥ ಸಹಕಾರಿ ವಲಯಗಳಿಗೆ ವಿಡಿಸಿಸಿ ಬ್ಯಾಂಕ್ ನೆರವು ನೀಡಿ ಎಲ್ಲ ಸಂಸ್ಥೆಗಳು ಪುನಶ್ಚೇತನ ಗಳಿಸಲು ನೆರವಾಗಿದೆ. ಇದರಿಂಧ ಜಿಲ್ಲೆಯಲ್ಲಿ ಸಹಕಾರಿ ರಂಗ ಬಲಿಷ್ಟವಾಗಿದ್ದು, ರಾಜ್ಯದಲ್ಲಿ ಮಾತ್ರವಲ್ಲ ದೇಶವೇ ನಮ್ಮ ಜಿಲ್ಲೆಯತ್ತ ನೋಡುವಂತಾಗಿದೆ ಎಂದು ಬಣ್ಣಿಸಿದರು.
ಕೇವಲ 63,000 ರೂ.ಗಳೊಂದಿಗೆ ಆರಂಭವಾಗಿದ್ದ ಡಿಸಿಸಿ ಬ್ಯಾಂಕ್ ಇಂದು 14,500 ಕೋಟಿ ರೂ. ವಹಿವಾಟು ಹೊಂದಿದ್ದು, ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದಾಯ ತೆರಿಗೆ ಪಾವತಿಯಲ್ಲಿನ ಶಿಸ್ತಿಗೆ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.
ಹೊಸ ಜಿಲ್ಲೆಗಳ ರಚನೆ ನಂತರ ಸರ್ಕಾರದ ನಿಯಮಗಳ ಪ್ರಕಾರ ವಿಜಾಪುರ ಡಿಸಿಸಿ ಬ್ಯಾಂಕ್ ವಿಭಜನೆ ಮಾಡಿದಾಗ ಬಾಗಲಕೋಟ ಡಿಸಿಸಿ ಬ್ಯಾಂಕ್ ಸ್ಥಿತಿ ವಿಜಯಪುರ ಬ್ಯಾಂಕಿಗಿಂತ ಉತ್ತಮವಾಗಿತ್ತು. ವಿಭಜನೆ ಸಂದರ್ಭದಲ್ಲಿ ಇದ್ದ ಸ್ಥಿತಿ ಗಮನಿಸಿದರೆ ಆಗ 317 ಕೋಟಿ ರೂ.ಗಳಿಂದ ದುಡಿಯುವ ಬಂಡವಾಳ 4902 ಕೋಟಿ ರೂ.ಗೆ ಏರಿದ್ದು, ಗಮನಾರ್ಹ ಸಾಧನೆ ಎಂದು ಹೇಳಿದರು.
ರೈತರಿಗೆ ನೆರವು ನೀಡುವಲ್ಲಿ ನಾವು ಇತರ ಬ್ಯಾಂಕುಗಳಿಗಿಂತ ಮುಂದೆ ಇದ್ದೇವೆ. ವಿಭಜನೆ ಹಂತದಲ್ಲಿ 25 ಶಾಖೆಗಳಿದ್ದು, ಇದೀಗ ಎರಡು ದಶಕಗಳಲ್ಲಿ 26 ಹೊಸ ಶಾಖೆಗಳನ್ನು ಸ್ಥಾಪಿಸಿರುವುದು ನಮ್ಮ ಬ್ಯಾಂಕಿನ ಸಾಧನೆ.
ಶಿರಹಟ್ಟಿ, ಬಾಲೆಹೊಸೂರ ಶ್ರೀ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮತ್ತು ತಿಕೋಟದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಬ್ಯಾಂಕಿನ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸುರೇಶ ಬಿರಾದಾರ, ಶೇಖರ ದಳವಾಯಿ, ಬಿ.ಎಸ್. ಪಾಟೀಲ ಯಾಳಗಿ, ಕಲ್ಲನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಗುರುಶಾಂತ ಬಿ. ನಿಡೋಣಿ, ಚಂದ್ರಶೇಖರ ಪಾಟೀಲ ಮನಗೂಳಿ, ಅರವಿಂದ ಪೂಜಾರಿ, ಎಸ್.ಎಸ್. ಜಹಗೀರದಾರ್, ಸಹಕಾರಿ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯ ಶ್ರೀ, ನಬಾರ್ಡ್ ಡಿಡಿಎಂ ವಿಕಾಸ್ ರಾಠೋಡ್, ಸಹಕಾರಿ ಸಂಘಗಳ ನಿವೃತ್ತ ಅಪರ ನಿಬಂಧಕರಾದ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ, ನಿವೃತ್ತ ಜಂಟಿ ನಿಬಂಧಕರಾದ ಾಡಳಿತ ಮಂಡಳಿ ಸಲಹೆಗಾರರಾದ ಕೊಟ್ರೇಶ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಿಇಒ ಎಸ್.ಎ.ಡವಳಗಿ ಪ್ರಾಸ್ತಾವಿಕ ಮಾತನಾಡಿದರೆ, ನಿರ್ದೇಶಕರಾದ ಗುರುಶಾಂತ ನಿಡೋಣಿ ಸ್ವಾಗತಿಸಿದರು. ಆರ್.ಎಂ.ಬಣಗಾರ, ಅಶೋಕ ಹಂಚಲಿ, ನಾಗರಾಜ ಬಿರಾದಾರ ನಿರೂಪಿಸದರೆ, ಉಪ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಿರಾದಾರ ವಂದಿಸಿದರು.
80 ಕೋಟಿ ವೆಚ್ಚದಲ್ಲಿ ತರಬೇತಿ ಸಂಸ್ಥೆ ವಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಸಹಕಾರಿಗಳಿಗೆ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಸಂಸ್ಥೆ ನಿರ್ಮಿಸಲಾಗುವುದು ಎಂದು ಅಧ್ಯಕ್ಷ, ಸಚಿವ ಶಿವಾನಂದ ಪಾಟೀಲ ಹೇಳಿದರು.ಈಗ ಬೆಂಗಳೂರಿನಲ್ಲಿ ಒಂದು ತರಬೇತಿ ಸಂಸ್ಥೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಂಸ್ಥೆ ಇಲ್ಲ. ಹೀಗಾಗಿ ಸಹಕಾರಿಗಳ ಅನುಕೂಲಕ್ಕಾಗಿ 2,300 ಆಸನಗಳ ಸಾಮರ್ಥ್ಯದ ಸುಸಜ್ಜಿತ ತರಬೇತಿ ಕಟ್ಟಡ ನಿರ್ಮಿಸಲಾಗುವುದು.
ದುಡ್ಡು ಬ್ಲಡ್ಡು ಎರಡೂ ಬೇಕು
ಪ್ರಾಮಾಣಿಕತೆ, ಪಾರದರ್ಶಕತೆ ಇದ್ದರೆ ಸಹಕಾರಿ ವಲಯ ನಿರೀಕ್ಷೆ ಮೀರಿ ಸಾಧನೆ ಮಾಡುತ್ತದೆ ಎಂಬುದಕ್ಕೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಕಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುನ್ನಡೆಯುತ್ತಿರುವುದೇ ಸಾಕ್ಷಿ. ಭವಿಷ್ಯದಲ್ಲಿ ನಿಮ್ಮ ಬ್ಯಾಂಕು ದೇಶದಲ್ಲೇ ಮೊದಲ ಸ್ಥಾನಕ್ಕೇರಲೆಂದು ಆಶಿಸುತ್ತೇನೆ.
ಫಕೀರ ದಿಂಗಾಲೇಶ್ವರ ಶ್ರೀಗಳು
ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠ, ಶಿರಹಟ್ಟಿ
30 ಸಹಕಾರಿ ಸಂಘಗಳಿಗೆ ಬಹುಮಾನ
ವಿಡಿಸಿಸಿ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ನಿರ್ವಹಣೆಗಾಗಿ ಸಹಕಾರಿ ವಲಯದ ವಿವಿಧ 30 ಸಂಸ್ಥೆಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ಬ್ಯಾಂಕಿನ ಆರ್ಥಿಕ ಸ್ಥಿತಿಗತಿ
ಶೇರು – 185.40 ಕೋಟಿ ರೂ.
ನಿಧಿಗಳು – 412.36 ಕೋಟಿ ರೂ.
ಠೇವು – 3814.58 ಕೋಟಿ ರೂ.
ದುಡಿಯುವ ಬಂಡವಾಳ – 4901.60 ಕೋಟಿ ರೂ.
ನಿವ್ವಳ ಲಾಭ – 25.18 ಕೋಟಿ ರೂ.



















