ಪಂದ್ಯ ಎಲ್ಲಿ ನಡೆಯುತ್ತಿದೆ?
ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
17ನೇ ಆವೃತ್ತಿಯ ಐಪಿಎಲ್ನ ಮೊದಲ ಡಬಲ್ ಹೆಡರ್ ಇಂದು. ಅಂದರೆ ಒಂದೇ ದಿನ ಎರಡೆರಡು ಪಂದ್ಯಗಳು ನಡೆಯಲ್ಲಿವೆ. ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಸೀಸನ್‌ನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನೊಂದಿಗೆ ಸೀಸನ್ ಪ್ರಾರಂಭಿಸಲು ಎದುರು ನೋಡುತ್ತಿವೆ. ಶಿಖರ್ ಧವನ್ ನಾಯಕತ್ವದಲ್ಲಿ ಪಂಜಾಬ್ ಕಳೆದ ಸೀಸನ್‌ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿತ್ತು. ಏತನ್ಮಧ್ಯೆ, ಡೆಲ್ಲಿ ಕಳೆದ ಸೀಸನ್‌ನಲ್ಲಿ 10 ಅಂಕಗಳೊಂದಿಗೆ ಒಂಬತ್ತನೇ ಸ್ಥಾನವನ್ನು ಗಳಿಸಿತ್ತು. ಹೀಗಿರುವಾಗ ಈ ಸೀಸನ್‌ನಲ್ಲಿ ಇಬ್ಬರಿಗೂ ಕಮ್ ಬ್ಯಾಕ್ ಮಾಡುವ ಅವಕಾಶ ಸಿಕ್ಕಂತಾಗಿದೆ.
ಶಿಖರ್ ಧವನ್ (ಓಪನರ್), ಪ್ರಭಸಿಮ್ರನ್ ಸಿಂಗ್ (ಓಪನರ್),ಜಾನಿ ಬೈರ್‌ಸ್ಟೋವ್ (ಬ್ಯಾಟರ್/ ವಿದೇಶಿ),ಅಥರ್ವ ತಾಯ್ದೆ (ಬ್ಯಾಟರ್) ,ಲಿಯಾಮ್ ಲಿವಿಂಗ್‌ಸ್ಟೋನ್ (ಆಲ್‌ರೌಂಡರ್),ಜಿತೇಶ್ ಶರ್ಮಾ (ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್),ಸ್ಯಾಮ್ ಕರ್ರನ್ (ಆಲ್‌ರೌಂಡರ್/ ವಿದೇಶಿ),ಹರ್ಷಲ್ ಪಟೇಲ್ (ಆಲ್‌ರೌಂಡರ್),ಹರಪ್ರೀತ್ ಬ್ರಾರ್ (ಆಲ್‌ರೌಂಡರ್),ಕಗಿಸೊ ರಬಾಡ (ಬಲಗೈ ವೇಗದ ಬೌಲರ್/ ವಿದೇಶಿ)ಅರ್ಷದೀಪ್ ಸಿಂಗ್ (ಎಡಗೈ ವೇಗದ ಬೌಲರ್)
ರಿಷಬ್ ಪಂತ್ (ನಾಯಕ), ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಒಸ್ತ್ವಾಲ್, ಪೃಥ್ವಿ ಶಾ, ಎನ್ರಿಕ್ ನಾರ್ಖಿಯಾ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಶಾನ್ ಮಾರ್ಶ್ಮದ್ ಶರ್ಮಾ, ಯಶ್ ಧುಲ್, ಮುಖೇಶ್ ಕುಮಾರ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ರಾಸಿಖ್ ದಾರ್, ಝಯ್ ರಿಚರ್ಡ್ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.
© 2025 VOJNews - Powered By Kalahamsa Infotech Private Limited.