ದಲಿತ ಮಹಿಳೆ ಮೇಲೆ ಹಲ್ಲೆ, ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೋಲಿಸ್ ಇಲಾಖೆ ನಿರಾಸಕ್ತಿ : ನಾಗೇಶ ತಳಕೇರಿ
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ದಲಿತ
ಮಹಿಳೆಯ ಮೇಲೆ ದುಷ್ಕರ್ಮಿಗಳು ಗಂಭೀರವಾಗಿ
ಗಾಯಗೊಳಿಸಿದ್ದರಿಂದ ದಲಿತ ಮಹಿಳೆ ವಿಜಯಪುರದ
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ದಲಿತ
ಮಹಿಳೆಯ ಮೇಲೆ ಹಲ್ಲೆಯಾಗಿರುವ ಕುರಿತು ದೌರ್ಜನ್ಯ
ಪ್ರಕರಣ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿ.23 ರಂದು ಪ್ರಕರಣ ದಾಖಲಾಗಿದ್ದರೂ ಸಹ ಇಲ್ಲಿಯವರೆಗೆ
ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ
ವಿಫಲವಾಗಿದೆ ಎಂದು ಆರ್‍ಪಿಐ ತಾಲೂಕು ಅಧ್ಯಕ್ಷ ನಾಗೇಶ
ತಳಕೇರಿ ಆರೋಪಿಸಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಪ್ರಕರಣ ದಾಖಲಾಗಿ 6 ದಿನಗಳು ಕಳೆದರೂ
ಆರೋಪಗಳನ್ನು ಬಂಧಿಸುತ್ತಿಲ್ಲ. ಆರೋಪಿಗಳಿಗೆ
ಹೊರಗಿನ ಜಾಮೀನು ಆಗಲು ಸಹಕಾರ ನೀಡುತ್ತಿದ್ದಾರೆ
ಎಂಬ ಸಂಶಯ ವ್ಯಕ್ತವಾಗಿದೆ ಎಂದು ಆರೋಪಿಸಿದ ಅವರು, ತಾಲಕಿನಲ್ಲಿ ಈಗಾಗಲೇ ಸುಮಾರು ಎರಡರಿಂದ ಮೂರು ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೂ ಪೋಲಿಸ್ ಅಧಿಕಾರಿಗಳು ದಲಿತರ ಸಮಸ್ಯೆಗೆ ಸ್ಪಂಧಿಸದೆ, ಆರೋಪಿಗಳ ಜೊತೆ ಒಪ್ಪಂದ ಮಾಡಿಸುವಂತೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಪೊಲೀಸ್ ಇಲಾಖೆಯಿಂದ ದಲಿತರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಅವರು ಆರೋಪಿಸಿದರು.
ಅಗರಖೇಡ ಗ್ರಾಮದ ದಲಿತ ಮಹಿಳೆ ಮಲ್ಲಮ್ಮ
ಎಂಬುವವಳ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಹಾಗೂ ಅವಹೇಳನ ರೀತಿಯಲ್ಲಿ ಮಾತನಾಡಿದ್ದು, ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಬಂದರೂ ಪ್ರಕರಣ ತಗೆದುಕೊಳ್ಳುವಲ್ಲಿ ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸಿದ್ದಾರೆ. ಹಳಗುಣಕಿ ಗ್ರಾಮದಲ್ಲಿ ದಲಿತ ಮಹಿಳೆಯ ಕೊಲೆಯಾದರೂ ಇಲ್ಲಿಯವರೆಗೆ ಆರೋಪಿಯನ್ನು ಬಂಧಿಸಿರುವುದಿಲ್ಲ.
ಗುಂದವಾನ ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ದಲಿತ
ಮಹಿಳೆ ಮೇಲೆಯೂ ಹಲ್ಲೆಯಾದರೂ ಆರೋಪಿಗಳ
ಮೇಲೆ ಕಠಿಣ ಕ್ರಮ ತಗೆದುಕೊಳ್ಳುವಲ್ಲಿ ಪೊಲೀಸ್
ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದ ಅವರು, ದಲಿತ ಸಮುದಾಯದವರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಪೊಲೀಸ್ ಅಧಿಕಾರಿಗಳು
ಗಂಭೀರವಾಗಿ ತಗೆದುಕೊಳ್ಳದಿದ್ದಲ್ಲಿ, ದಲಿತರಿಗೆ
ನ್ಯಾಯ, ರಕ್ಷಣೆ ನೀಡಲು ವಿಫಲವಾದರೆ ಮುಂಬರುವ ದಿ
ನದಲ್ಲಿ ಆರ್‍ಪಿಐ ಪಕ್ಷದಿಂದ ಜಿಲ್ಲೆಯಾಧ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.