ಡಿ. ೧೦ ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ – ಜಯಮೃತ್ಯುಂಜಯ ಸ್ವಾಮೀಜಿ
ಇಂಡಿ : ಬೆಳಗಾವಿಯಲ್ಲಿ ಡಿ. ೧೦ ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ೨ ಎ ಸೇರ್ಪಡೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವದೆಂದು ಪಂಚಮಸಾಲಿ ಸಮಾಜದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಸಹಕಾರ ಸೌಹಾರ್ಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಅತೀ ಹೆಚ್ಚು ದಿನಗಳ ಕಾಲ ಪಂಚಮಸಾಲಿ ಸಮಾಜ ೨ ಎ ಸೇರ್ಪಡೆ ಆಗ್ರಹಿಸಿ ಹೋರಾಟ ನಡೆದಿದೆ.
ಪಂಚಮಸಾಲಿ ಸಮಾಜದ ಬೇಡಿಕೆ ದೇಶದ ಗಮನ ಸೆಳೆದಿದೆ. ೨೦೨೧ ರಿಂದ ಹೋರಾಟ ನಡೆದಿದೆ.ಆದರೂ ಈ ವರೆಗೆ ಬೇಡಿಕೆ ಇಡೇರಿಲ್ಲ. ಇಲ್ಲಿಯ ವರೆಗೂ ಸ್ಪಂದಿಸಿಲ್ಲ.
ಕಳೆದ ಬಾರಿ ಬಿಜೆಪಿ ಸರಕಾರವಿದ್ದಾಗ ಪಂಚಮಸಾಲಿ ಸಮಾಜವನ್ನು ೨ ಎ ಸೇರ್ಪಡೆ ಬದಲಾಗಿ ೨ ಡಿ ಮಾಡಿದರು. ಅದು ಬೇಕಾಗಿಲ್ಲ, ಹೀಗಾಗಿ ೨ ಎ ಸೇರ್ಪಡೆಗೆ ಹೋರಾಟ ಮುಂದು ವರೆದಿದೆ.
ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮಾತುಕತೆಗೆ ಕರೆದಿಲ್ಲ. ವಿಧಾನಸಭೆಯಲ್ಲಿ ಚರ್ಚೆ ನಡೆದಿಲ್ಲ, ಹೀಗಾಗಿ ರಾಜ್ಯದ ವಕೀಲರು ಬೆಳಗಾಂವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು.
ರಾಜ್ಯ ಸರಕಾರ ಪಂಚಮಸಾಲಿ ೨ ಎ ಕೇಂದ್ರಕ್ಕೆ ಶಿಫಾರಸು ಮಾಡಿ ಕಳುಹಿಸಬೇಕು. ವಿಳಂಬವಾಗುತ್ತಿದ್ದು ಸರಕಾರದ ಗಮನ ಸೆಳೆಯಲು ಡಿ. ೧೦ ರಂದು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಿದೆ.
ಅಂದು ಅಂದಾಜು ಐದು ಸಾವಿರ ಟ್ರಾö್ಯಕ್ಟರಗಳು ಮತ್ತು ಸಾವಿರಾರು ಕಾರ್ಯಕರ್ತರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವಿದೆ. ವಕೀಲರ ಸಂಘದ ಮುಂದಾಳತ್ವದಲ್ಲಿ ನಡೆಯುವ ಈ ಪ್ರತಿಭಟನೆಗೆ ವಿಜಯಪುರ ಜಿಲ್ಲೆಯ ಪ್ರತಿ ಹಳ್ಳಿಯಿಂದ ಕನಿಷ್ಠ ಐದು ಟ್ರಾö್ಯಕ್ಟರ ತರಬೇಕು. ಇಲ್ಲವೆ ವಾಹನಗಳನ್ನು ತರಬೇಕು ಎಂದರು.
ಈಗಾಗಲೇ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳ ವಕೀಲರ ಸಂಘ ತನ್ನ ಬೆಂಬಲ ಸೂಚಿಸಿದ್ದು ಈ ಕುರಿತು ಬೆಳಗಾಂವ, ವಿಜಯಪುರ, ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪೂರ್ವ ಭಾವಿ ಸಭೆ ನಡೆಸಲಾಗುವದು ಎಂದರು.
ಈಗಾಗಲೇ ದಾವಣಗೆರೆಯ ರಾಜ್ಯ ಪಂಚಮಸಾಲಿ ಹೋರಾಟದ ಯುವ ಘಟಕದ ಉಪಾಧ್ಯಕ್ಷ ಅಜಯಕುಮಾರರವರು ಹೋರಾಟಕ್ಕೆ ದಾವಣಗೆರೆಯಿಂದ ಒಂದು ಸಾವಿರ ಟ್ರಾö್ಯಕ್ಟರ ಬರಲಿದ್ದು ಅದಕ್ಕೆ ಎಣ್ಣೆಯ ಖರ್ಚನ್ನು ತಾವೇ ನೀಡುವದಾಗಿ ತಿಳಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಂಡಿ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್.ಬಿರಾದಾರ, ನ್ಯಾಯವಾದಿ ಎಸ್.ಆರ್.ಬಿರಾದಾರ, ನ್ಯಾಯವಾದಿ ಡಿ.ಜಿ. ಜೋತಗೊಂಡ , ಮಂಜುನಾಥ ಕಾಮಗೊಂಡ, ಶರಣು ಬಂಡಿ, ಉಮೇಶ ಬಳಬಟ್ಟಿ,ಜೆ.ಬಿ.ಬೆನೂರ, ಶಿವಾನಂದ ಚಾಳಿಕಾರ , ವಿ.ಪಿ.ಪಾಟೀಲ,ಜಿ.ಎಸ್.ಪಾಟೀಲ ಮತ್ತಿತರಿದ್ದರು.