ದೇಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್ ನಲ್ಲಿ ಡಿ-ಸ್ಯಾಟ್ ಸ್ಕಾಲರ್‌ಶಿಪ್ ಪರೀಕ್ಷೆ
ಇಂಡಿ : ನಗರದ ದೇಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮೇ -4 ರಂದು ಡಿ-ಸ್ಯಾಟ್ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯು 5ನೇ ತರಗತಿಯನ್ನು ಉತ್ತೀರ್ಣ ಹೊಂದಿ 6ನೇ ತರಗತಿಗೆ ದಾಖಲಾತಿ ಪಡೆಯುವ ಮಕ್ಕಳಿಗಾಗಿ ಇರುತ್ತದೆ. ಪ್ರತಿ ವರ್ಷವು ಮೇ ತಿಂಗಳ ಮೊದಲ ಭಾನುವಾರದಂದು ನಡೆಸಲಾಗುತ್ತದೆ. ಈ ಪರೀಕ್ಷೆಯ ಉದ್ದೇಶ ಯಾವ ಮಕ್ಕಳು ಬಡತನದಲ್ಲಿ ಇರುತ್ತಾರೋ ಅಂತಹ ವಿದ್ಯಾವಂತ 2 ಮಕ್ಕಳನ್ನು ಈ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಹಾಗೂ ಆಯ್ಕೆಯಾದ 2 ಮಕ್ಕಳಿಗೆ 6ನೇ ತರಗತಿಯಿಂದ 10ನೇ ತರಗತಿಯವರೆಗೆ 5 ವರ್ಷಗಳ ಕಾಲ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಿಂದ ಈಗಾಗಲೇ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು ಅದರಲ್ಲಿ ಇದೂ ಕೂಡಾ ಒಂದು. ಈಗಾಗಲೇ ಕಳೆದ 3 ವರ್ಷಗಳಿಂದ ಈ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದ್ದು ಸುಮಾರು 5 ರಿಂದ 6 ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಹಾಗೂ ತಾಲೂಕಿನಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಸಲುವಾಗಿ ಮಕ್ಕಳಿಗೆ ಮತ್ತು ಪಾಲಕರಿಗೆ ಅನೂಕೂಲವಾಗುವ ದೃಷ್ಟಿಯಿಂದ ಇನ್ನೂ ಉತ್ತಮ ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಂಸ್ಥೆಯ ಅಧ್ಯಕ್ಷರ ಇಂತಹ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ ಹಾಗೂ ಪರೀಕ್ಷೆಯನ್ನು ಉದ್ದೇಶಿಸಿ ಶಾಲೆಯ ಪ್ರಾಂಶುಪಾಲ ವಿದ್ಯುಲತಾ ಸುತಾರರವರು ಕೂಡಾ ಶಿಕ್ಷಣವನ್ನು ನೀಡುವುದು ನಮ್ಮ ಆಧ್ಯ ಕರ್ತವ್ಯ ಅದಕ್ಕೆ ಸಂಸ್ಥೆಯ ಅದ್ಯಕ್ಷರ ಸಹಕಾರ ದೊರಕಿರುವುದು ಸಂತೋಷದಾಯಕವಾಗಿದೆ ಎಂದಿದ್ದಾರೆ.