ಈ ಸಂದರ್ಭದಲ್ಲಿ ಸಾಮಾಜೀಕ ಕಾರ್ಯಕರ್ತ ಪ್ರೀತು ದಶವಂತ ಮಾತನಾಡಿದ ಅವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ನಮ್ಮ ಮೂಲ ಸಂಸ್ಕೃತಿ, ಹಳ್ಳಿಗರ ಆಚಾರ, ವಿಚಾರ ಸಮಾಜದ ಓರೆ ಕೋರೆ ಇವೆಲ್ಲವನ್ನೂ ಜಾನಪದ ಸಾಹಿತ್ಯ ದ ಕ್ಷೇತ್ರದಲ್ಲಿ ಬಹಳ ಸೊಗಸಾಗಿ ತೋರಿಸುವ ಮೂಲಕ ಸಮಾಜಕ್ಕೆ ಪರಿವರ್ತನೆ ದಾರಿ ತೋರಿಸದವರು ಎಂದು ಹೇಳಿದರು.
ಇಂದು ಕನ್ನಡ ಸೊಗಡನ್ನು ವಿಸ್ತಾರಗೊಳಿಸಿ & ಶ್ರೀಮಂತಗೊಳಿಸಿ, ನವೋದಯ ಸಾಹಿತ್ಯದ ಹರಿಕಾರರಾಗಿ ವರಕವಿ ಎನಿಸಿಕೊಂಡು ಭಾರತದ ಅತ್ಯುನ್ನತ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಮೇರು ಸಾಹಿತಿ, ಪದ್ಮಶ್ರೀ ಡಾ. ದ. ರಾ. ಬೇಂದ್ರೆ ಅವರು ಒಬ್ಬರು ಎಂದು ಹೇಳಿದರು. ಇವರ ಜಾನಪದ ಧಾಟಿಯ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ. ಅಷ್ಟೇ ಅಲ್ಲದೆ ಮಗನನ್ನು ಕಳೆದುಕೊಂಡ ಸಮಯದಲ್ಲಿ ಪತ್ನಿಯಕಡೆ ತಿರುಗಿ ಹಾಡಿದ ಹಾಡು ನೀ ಹಿಂಗ ನೋಡಬ್ಶಾಡ ನನ್ನ ನೀಹಿಂಗ್ ನೋಡಿದರೆ ನನ್ನ ತಿರುಗಿ ನಾ ಹ್ಶಾಂಗ ನೋಡಲೇ ನಿನ್ನ ಹಾಡು ಮನೆಮಾತಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಮುಖಂಡರು ಹಾಗೂ ಮುದ್ದುಮಕ್ಕಳು ಉಪಸ್ಥಿತರಿದ್ದರು.