ಶಹಾಪುರ: ತಾಲೂಕಿನ ದೊರನಹಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆ ಇಂದ ತಗುಲಿದ ಬೆಂಕಿಗೆ 20ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಲಾಗಿದ್ದು,
ಗಾಯಳುಗಳಿಗೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ನಿಡಲಾಗುತ್ತಿದೆ. ಗಾಯಗೊಂಡವರಲ್ಲಿ ಬಹುತೇಕರ ಸ್ಥಿತಿ ಗಂಭೀರ ವಾಗಿದ್ದು ಹೆಚ್ಚಿನ ಚಿಕೆತ್ಸೆಗೆ 4ಕ್ಕೂ ಆಂಬುಲೆನ್ಸ್ ಗಳ ಮುಕಾಂತರ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ಭಗವಂತ ಅನವಾರ, ಶಹಾಪುರ ತಹಸೀಲ್ದಾರ್, ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಕರ್, ಪಿಎಸ್ಐ,THO ಡಾ. ರಮೇಶ್ ಗುತ್ತೇದಾರ ರವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಕುಟುಂಬಸ್ತರಿಗೆ ಸಮಾಧಾನ ಹೇಳಿದರು.