ಮುದ್ದೇಬಿಹಾಳ : ಬಾವಿಯಲ್ಲಿ ಬೃಹತ್ ಮೊಸಳೆ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಚಿನಿವಾಲರ್ ಪ್ಲಾಟ್‌ನಲ್ಲಿ ಆಗಿದೆ. ಮಹಾಂತೇಶ ಎನ್ನುವರು ಬಹಿರ್ದೆಸೆಗೆ ಹೋದಾಗ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಅಲ್ಲದೇ, ಈ ಬೃಹತ್ ಮೊಸಳೆ ಕಂಡು ಪ್ಲಾಟ್ ನಿವಾಸಿಗಳು ಭಯಭೀತರಾಗಿದ್ದಾರೆ. ಅಲ್ಲದೇ, ಈ ಹಿಂದೆ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ ಎಂದು ವರದಿ ಮಾಡಲಾಗಿತ್ತು. ಇದೀಗ್ ಮತ್ತೆ ಮೊಸಳೆ ನೋಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮೊಸಳೆ ಸೆರೆ ಹಿಡಿದು ಬೇರೆಡೆಗೆ ಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.