ವಿಜಯಪುರ : ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವಗಳು ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಹೊರವಲಯದಲ್ಲಿರುವ ಕಾಲುವೆಯಲ್ಲಿ ಬುಧವಾರ ಪತ್ತೆಯಾಗಿದೆ. ನಿಡಗುಂದಿ ನಿವಾಸಿಗಳಾದ ಯಲ್ಲಪ್ಪ ಗುಡದಪ್ಪಗೋಳ(೩೦), ರಾಜಾಸಾಬ ಕಲಾಲ್(೩೫) ಶವ ಪತ್ತೆಯಾಗಿದೆ. ಕುಡಿದ ಮತ್ತಿನಲ್ಲಿ ಮೂರು ದಿನಗಳ ಹಿಂದೆ ಕಾಲುವೆಗೆ ಬಿದ್ದಿದ್ದ ಯಲ್ಲಪ್ಪ. ಬಟ್ಟೆ ತೊಳೆಯಲು ಹೋಗಿ ಕಾಲುವೆಯಲ್ಲಿ ರಾಜಾಸಾಬ್ ಬಿದ್ದಿದ್ದಾನೆ. ಅಣತಿ ದೂರದಲ್ಲಿ ಇಬ್ಬರ ಶವಗಳು ಇಂದು ಪತ್ತೆಯಾಗಿವೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.