ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮುಕ್ತ ಪರೀಕ್ಷೆ ಕರೆ
ವರದಿ ; ಬಸವರಾಜ ಕುಂಬಾರ, ಮುದ್ದೆಬಿಹಾಳ
ಮುದ್ದೇಬಿಹಾಳ:ಮಕ್ಕಳ ಇವತ್ತಿನ ಬದುಕಿನಲ್ಲಿ ಶಿಕ್ಷಣ ಕಲಿತರೆ ಸಮಾಜದಲ್ಲಿ ಉನ್ನತ ಸಾಧನೆ ಮಾಡಲು ಸಾದ್ಯ ಎಂದು ಸಂಸ್ಥೆಯ ಆಡಳಿತ ಅಧಿಕಾರಿ ಬಿ ಜಿ ಬಿರಾದಾರ ಹೇಳಿದರು.
ತಾಲ್ಲೂಕಿನ ಅಡವಿ ಹುಲಗಬಾಳ ಗ್ರಾಮದ
ಅಹಿಲ್ಯಾದೇವಿ ಹೋಲ್ಕರ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಅಭ್ಯುದಯ ಅಂತರಾಷ್ಟ್ರೀಯ ಪ್ರಾಥಮಿಕ ಮತ್ತು ಪ್ರೌಢ ಕನ್ನಡ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಸಮಾಜ ಸೇವಕ ಶಿಕ್ಷಣ ಪ್ರೇಮಿಗಳಾದ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಅವರ ಮಾರ್ಗದರ್ಶನದಂತೆ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮದಲ್ಲಿವ ಅವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮುಕ್ತ ಪರೀಕ್ಷೆ ಬರೆದು ಯಶಸ್ವಿಯಾಗಿ ಎಂದು ಸಲಹೆಯನ್ನು ಮಕ್ಕಳಿಗೆ ನೀಡಿದರು.
ಈ ವೇಳೆ ಮುಖ್ಯಗುರುಗಳಾದ ಶಿವು ಹಾದಿಮನಿ ಅವರ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸ್ಕಾರದ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೈನಾಪುರ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಪಕ ಶಿವು ಹಾದಿಮನಿ,ಮೇಲ್ವಿಚಾರಕಿ ಗೀತಾ ಹುರಕಡ್ಲಿ ಶಾಲೆಯ ಮುಖ್ಯಗುರುಗಳಾದ ಬಿ ಕೆ ಪೂಜಾರಿ,ಆಂಗ್ಲ ಮಾಧ್ಯಮದಲ್ಲಿ ನಿಖಿಲ್ ಮದರಿ ಕನ್ನಡ ಮಾಧ್ಯಮದಲ್ಲಿ ಗಿರಿಜಾ ನೆಲವಾಸಿ ವಿದ್ಯಾರ್ಥಿನಿ ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆಯಾದರು.
ಶೋಭಾ ಗುರುವಿನ, ನಿರೂಪಿದರು, ರಮೇಶ್ ಎಚ್ ವಂದನಾರ್ಪಣೆ ಮಾಡಿದರು. ಶಾಲೆಯ ಶಿಕ್ಷಕ ವೃಂದ, ಶಾಲೆಯ ವಾಹನ ಚಾಲಕರು ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.