ಸಿಂಧನೂರು: ತಾಲೂಕಿನ ತುರವಿಹಾಳ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 131 ನೇ ಜಯಂತಿ ಮತ್ತು ಮಹಾವೀರ ಜಯಂತಿಯ ನಿಮಿತ್ತವಾಗಿ ಆವರಣದಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾದ ಮಂಜುನಾಥ ಪಕ್ಷಿಗಳ ಅರವಟ್ಟಿಗೆಗಳಿಗೆ ಆಹಾರ ಧಾನ್ಯ ಮತ್ತು ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ, ಸಿಂಧನೂರು ವನಸಿರಿ ಫೌಂಡೇಶನ ತಾಲೂಕ ಅದ್ಯಕ್ಷರಾದ ರಮೇಶ ಕುನ್ನಟಗಿ, ವನಸಿರಿ ಕಾರ್ಯಧ್ಯಕ್ಷ ಚಂದ್ರಶೇಖರ್ ಪವಾಡಶೆಟ್ಟಿ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ವನಸಿರಿ ತಂಡದ ಸದಸ್ಯರುಗಳಾದ ಶಂಕರಗೌಡ ದೇವರಮನಿ, ಪ್ರದೀಪ್, ಚನಪ್ಪ, ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಹುಸೇನ್ ಬೀ, ಮೋದೀನ್ ಬೀ, ಇಂದಿರಾ, ಪೂಜಾ, ಪರಮೇಶ, ಬಾಬು ಉಪಸ್ಥಿತರಿದ್ದರು.