ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಶಿಕ್ಷಣದಿಂದ ಸಮಾನತೆ , ಉನ್ನತ ಸ್ಥಾನ ಪಡೆಯಲು ಸಾಧ್ಯ
ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ದೇವರ ಹೆಸರಿನಲ್ಲಿ ಮೌಡ್ಯತೆ ಕಂದಾಚರ ಕೈ ಬಿಡಬೇಕು ದೇವರ ಹೆಸರಿನಲ್ಲಿ ಪ್ರಾಣಿ ಬಲಿ ವಿರುದ್ಧ ಅಂಬೇಡ್ಕರ್ ಅವರು ವಿರೋಧಿಸಿದ್ದರು ಎಂದು ಕೆ ಎಸ್ ಡಿ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ಅವರು ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಶಿಕ್ಷಣದಿಂದ ಸಮಾನತೆ , ಉನ್ನತ ಸ್ಥಾನ ಪಡೆಯಲು ಸಾಧ್ಯ ಇಂದು ವಿಜ್ಞಾನದಲ್ಲಿ ನಾವು ಮುಂದೆವರೆದಿದ್ದರೂ ಹಿಂದುಳಿದ ,ದಲಿತ ,ಅಲ್ಪಸಂಖ್ಯಾತ ವರ್ಗದ ಜನರು ದೇವರ ಹೆಸರಿನಲ್ಲಿ ಬ್ಯಾಟಿಗಳನ್ನು ಮಾಡುತ್ತಾರೆ ಈ ಮೌಡ್ಯತೆ ಬಿಡಬೇಕು ಬಸವಣ್ಣನವರು ಒಳ್ಳೆಯ ಸಂಸ್ಥಾರ ನೀಡಿ ಜಾತಿ ರಹಿತ ಕಾಯಕ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದರು.
ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿ ಬ್ರಿಟಿಷ್ ಆಡಳಿತದಲ್ಲಿ ಸಂಸತ್ತು ಪ್ರವೇಶಿಸಿದ್ದ ಅಂಬೇಡ್ಕರ್ ಅವರನ್ನು ಕಾನೂನು ಮಂತ್ರಿಯಾಗಿ ಸಂಸತ್ತಿಗೆ ಬರದಂತೆ ತಡೆಯಲು ಯತ್ನ ಮಾಡಲಾಗಿತ್ತು ಅವರು ಪಕ್ಷಾತೀತವಾಗಿ ಚುನಾವಣೆಗೆ ನಿಂತಾಗ ಅವರ ಆಪ್ತಸಹಾಯಕನನ್ನು ಅವರ ವಿರುದ್ಧ ನಿಲ್ಲಿಸಿ ಸೋಲಿಸಲಾಯಿತು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ , ಇಂದು ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುತ್ತಾರೆ ಅಂಬೇಡ್ಕರ್ ಅವರು ಸಂವಿಧಾನ ತಿದ್ದುಪಡಿ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ ಇಂದು ಕೆಲ ವಿಷಯಗಳಲ್ಲಿ ಸಂವಿಧಾನದ ತಿದ್ದುಪಡಿ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ ಮಾತನಾಡಿದರು ಪ್ರಾಸ್ತಾವಿಕವಾಗಿ ಹರೀಶ ನಾಟಿಕಾರ, ಅಂಬೇಡ್ಕರ್ ಕುರಿತು ಉಪನ್ಯಾಸ ಆರ್ ಎಸ್ ಸಜ್ಜನ ಮಾಡಿದರು ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪುರಸಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ವಿತರಿಸಲಾಯಿತು, ಅಂಬೇಡ್ಕರ್ ಜಯಂತಿ ನಿಮಿತ್ತ ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಗೌರವ ಸ್ಮರಣಿಕೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ತಹಶಿಲ್ದಾರ ಬಲರಾಮ ಕಟ್ಟಿಮನಿ, ತಾಪಂ ಇಒ ನಿಂಗಪ್ಪ ಮಸಳಿ, ಬಿಇಒ ಬಿ ಎಸ್ ಸಾವಳಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಾಮರಾಜ ಬಿರಾದಾರ ದಲಿತ ಮುಖಂಡ ಡಿ ಬಿ ಮುದೂರ, ರೇವಣಪ್ಪ ಹರಿಜನ,ಸಿಪಿಐ ಮಹಮ್ಮದ್ ಫಸಿಯುದ್ದಿನ ಸೇರಿದಂತೆ ಪುರಸಭೆ ಸದಸ್ಯರು ,ನಾಮನಿರ್ದೇಶಿತ ಸದಸ್ಯರು ವಿವಿಧ ಸಮಾಜದ ಮುಖಂಡರು ಗಣ್ಯರು ದಲಿತಪರ ಪದಾಧಿಕಾರಿಗಳು ಭಾಗವಹಿಸಿದ್ದರು
ಟಿ ಡಿ ಲಮಾಣಿ ಸಂವಿಧಾನ ಪೀಠಿಕೆ ಭೋದಿಸಿದರು.
ಸಂಗಮೇಶ ಶಿವಣಗಿ ಬಳಗ ನಾಡಗೀತೆ ಹಾಡಿದರು, ವೈ ಹೆಚ್ ವಿಜಯಕರ ಸ್ವಾಗತಿಸಿದರು ಪರಶುರಾಮ ಕಣ್ಣೂರ ನಿರೂಪಿಸಿ ವಂದಿಸಿದರು.
ಸಂವಿಧಾನ ತಿದ್ದುಪಡಿ ಮಾಡಬಾರದು ಸಂವಿಧಾನ ತಿದ್ದುಪಡಿಯಾದರೆ ಅಷ್ಟಾವರಣ ಪದ್ದತಿ ವರ್ಣಾಶ್ರಮ ಮರಳಿ ಗೋಚರಿಸುತ್ತವೆ ಇದು ದೇಶಕ್ಕೆ ಮಾರಕ ,ದಲಿತ ವರ್ಗದ ರಾಜಕೀಯ ಮೀಸಲಾತಿ ತಗೆಯಬಾರದು ಇದು ನನ್ನ ಅಭಿಪ್ರಾಯ ; ಸಿ.ಎಸ್ ನಾಡಗೌಡ
ಅಂದಿನ ಪ್ರಧಾನಿ ನೆಹರು ಅವರಿಗೆ ಅಂಬೇಡ್ಕರ್ ಅವರು ಧರ್ಮಾದರಿತ ಮೀಸಲಾತಿ ಬೇಡ ದೇಶದಲ್ಲಿ ಕಾಮನ್ ಸಿವಿಲ್ ಕೂಡ್ ಜಾರಿಗೆ ತರಬೇಕೆಂದು ಹೇಳಿದಾಗ ಅದಕ್ಕೆ ಕವಡೆಕಾಸಿನ ಕಿಮ್ಮತ್ತು ಸಿಗಲಿಲ್ಲ ಕಾಶ್ಮೀರದ 370 ವಿರೋಧಿಸಿದ್ದು ಅಂಬೇಡ್ಕರ್ ಅವರು , ಜಾತಿ ಧರ್ಮ ಆಧರಿತ ಮತದಾನದಿಂದ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಹೇಳಿದ್ದರು ದೇಶದಲ್ಲಿ ಏಕರೂಪ ಕಾನೂನು ಜಾರಿಗೆ ಬರಬೇಕು ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಎಲ್ಲರಿಗೂ ಉಚಿತ ಶಿಕ್ಷಣ ಸಿಗಬೇಕು; ಶಾಂತಗೌಡ ಪಾಟೀಲ್ ನಡಹಳ್ಳಿ