ಭಾರತದ ಸಂವಿಧಾನ ಸರ್ವಶ್ರೇಷ್ಠವಾದದ್ದು : ಮುಬಾರಕ್ ಇಂಡಿಕರ್
ಇಂಡಿ : ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತೀ ಅದ್ದೂರಿಯಾಗಿ, ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿ ಮುಬಾರಕ್ ಇಂಡಿಕರ್ ಗ್ನಿಶಾಮಕ ಠಾಣಾ ಇಂಡಿ ಅವರು ಧ್ವಜಾರೋಹಣಗೈದು, ನಮ್ಮ ದೇಶದ ಪ್ರಜಾಪ್ರಭುತ್ವದ ಮಹತ್ವವನ್ನು ಸಾರುತ್ತಾ ವಿದ್ಯಾರ್ಥಿಗಳು ತಮ್ಮ ಅಗಾಧವಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ದೇಶದ ಚಿತ್ರಣವನ್ನು ಬದಲಾಯಿಸಬೇಕೆಂದು ಕರೆ ನೀಡಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತಾನಾಡಿದರು.
ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ತಳಾವರ ಅವರು ಮಾತನಾಡಿ, ಶಾಸನಬದ್ಧವಾದ ಸಂವಿಧಾನ ರಚನೆಯಿಂದ ಆಡಳಿತಾತ್ಮಕ ಸುಧಾರಣೆಗಳು ಕಂಡುಬಂದಿದೆ. ವಿದ್ಯಾರ್ಥಿಗಳು ಸಹ ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಾವಿ ರಾಷ್ಟ್ರದ ಬೆಳವಣಿಗೆಗೆ ಸಹಕಾರಿಯಾಗುವಂತಹ ಕಾರ್ಯ ಚಟುವಟಿಕೆಗಳನ್ನು ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಸಹಶಿಕ್ಷಕಿ ವಾಣಿಶ್ರೀ ರೂಗಿ ಹಾಗೂ ಪೂಜಾ, ರೇಣುಕಾ, ಭಕ್ತಿ, ಅಂಜುಶ್ರೀ ಹಾಗೂ ಪುಟಾಣಿ ಮಕ್ಕಳು ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ, ಪತ್ರಕರ್ತ ಶಂಕರ್ ಜಮಾದಾರ, ರೈತ ಮುಖಂಡ ಭೀಮಣ್ಣ ಉಪ್ಪಾರ, ಗ್ರಾ.ಪ ಸದಸ್ಯ ಭೀಮರಾಯ ಜೇವೂರ, ನಿಸಾರ ಬಾಗವಾನ, ಗುರಪ್ಪ ಅಗಸರ, ಸಂಜೀವ ರೂಗಿ, ಜಟ್ಟಪ್ಪ ತಳವಾರ, ಈರಣ್ಣ ಅಗಸರ, ಹಣಮಂತ ಸೊಡ್ಡಿ ಮತ್ತು ಅಶ್ವೀನಿ ತಳವಾರ, ಪುಜಾ ರೂಗಿ, ಸುಮನ್ ಬಾಗವಾನ ಹಾಗೂ ಸಿಬ್ಬಂದಿ ವರ್ಗದವರು, ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲು ಬೋಡಿ ಸ್ವಾಗತಿಸಿದರು. ದಿವ್ಯಾ ಹೊಸಮನಿ ನಿರೂಪಿಸಿ, ವಂದಿಸಿರು.