ದೈ.ಶಿ ಶಿಕ್ಷಕರನ್ನು ಬೋಧಕ ಶಿಕ್ಷಕರೆಂದು ಪರಿಗಣಿಸಿ, ಮತಗಟ್ಟೆ ಕರ್ತವ್ಯ ಅಧಿಕಾರಿ ಕರ್ತವ್ಯದಿಂದ ಕೈ ಬಿಡುವಂತೆ ಒತ್ತಾಯಿಸಿ ಮನವಿ
ಇಂಡಿ: ದೈಹಿಕ ಶಿಕ್ಷಕರನ್ನು ಮತಗಟ್ಟೆ ಕರ್ತವ್ಯ ಅಧಿಕಾರಿ (ಬಿಎಲ್‌ಓ) ಕರ್ತವ್ಯದಿಂದ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ಅವರ ಅನುಪಸ್ಥಿತಿಯಲ್ಲಿ ಸಿರಸ್ಥೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಹೊಸಮನಿ ಮಾತನಾಡಿ, ದೈಹಿಕ ಶಿಕ್ಷಕರಿಗೆ ಶಾಲೆಯಲ್ಲಿ ಮಕ್ಕಳಿಗೆ ಆಟೋಟ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆ ಮಾಡಿಸುವುದು ಸೇರಿದಂತೆ ಇನ್ನಿತರ ಕೆಲಸಗಳಿರುತ್ತವೆ. ಹೀಗಾಗಿ ದೈಹಿಕ ಶಿಕ್ಷಕರನ್ನು ಬಿಎಲ್‌ಓ ಕಾರ್ಯದಿಂದ ಕೈ ಬಿಡಬೇಕೆಂದು ಒತ್ತಾಯಿಸಿದರು.
ಶಂಕರ ಚವ್ಹಾಣ, ದಶರಥ ಕೋರೆ, ಮಹೇಶ ಮಡಿವಾಳ, ಬಸವರಾಜ ಕಲ್ಲೊಳ್ಳಿ, ಎಸ್.ಆರ್. ಮಾಶ್ಯಾಳ, ಜೆ.ಎಂ. ಕಡಣ , ಅಮಿನ್ ಕಂಬಾರ, ಎಸ್.ಎ. ಅಂಬಾರಿ, ಎ.ಎಫ್ ಚವ್ಹಾಣ, ಶೋಭಾ ಕೋಳೇಕಾರ್, ಎಲ್.ಎಂ. ಕಾಗವಾಡ, ಎಸ್.ಎಂ. ಕಾರ್ಕಲ್, ಜೆ.ಬಿ. ಬಗಲಿ, ಆರ್. ಬಿ. ದೇವಣಗಾಂವಮ, ಆರ್.ಕೆ.ಹಳ್ಳಿ, ಸಿ.ಎಂ. ಮಸಳಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ದೈಹಿಕ ಶಿಕ್ಷಕರನ್ನು ಮತಗಟ್ಟೆ ಕರ್ತವ್ಯ ಅಧಿಕಾರಿ (ಬಿಎಲ್‌ಓ) ಕರ್ತವ್ಯದಿಂದ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಕಂದಾಯ ಇಲಾಖೆಯ ಶಿರಸ್ಥೇದಾರ ಎಸ್. ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.