ರಾಯಚೂರು: ನಮ್ಮೂರಿಗೆ ಯಾರೇ ಬಂದು ಪ್ರಚಾರ ಮಾಡಲಿ ಸುಮ್ಮನೇ ಇರಬೇಕು ಎಂದು ನಮ್ಮವರಿಗೆ ಹೇಳಿದ್ದೇನೆ. ರಾಜಕೀಯ ಧೃವೀಕರಣಕ್ಕೆ ಎದುರಾಳಿಗಳು ಈ ರೀತಿ ಮಾಡ್ತಿದ್ದಾರೆ. ಅಲ್ಲದೆ ನಮ್ಮ ಮನೆ ಮುಂದೆ ಬಿಜೆಪಿ ಪರ ಘೋಷಣೆ ಕೂಗಿದ್ದಾರೆ. ಹಾಗಾಗಿ ಸ್ವಲ್ಪ ಗಲಾಟೆಯಾಗಿದೆ ಎಂದು ವರುಣಾದಲ್ಲಿ ನಡೆದ ಗಲಾಟೆ ವಿಚಾರ ಬಗ್ಗೆ ಮಾಜಿ ಸಿ.ಎಂ. ಸಿದ್ದರಾಮಯ್ಯ ರಾಯಚೂರು ನಗರದಲ್ಲಿ ಹೇಳಿದರು.
ಬಿಜೆಪಿ ಈಗ ತಾವೇ ಅಧಿಕಾರಕ್ಕೆ ಬರ್ತಿವಿ ಎಂಬ ಭ್ರಮೆಯಲ್ಲಿದೆ. ಕರ್ನಾಟಕದ ಜನರು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ತೀರ್ಮಾನ ಮಾಡಿದ್ದಾರೆ. ಮೋದಿ ನೂರು ಸಾರಿ ಬಂದ್ರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ.
ಇದು ರಾಜ್ಯ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಅಲ್ಲ. 224 ಕ್ಷೇತ್ರದಲ್ಲಿ ಬಿಜೆಪಿ ಮುಸ್ಲಿಂಮರಿಗೆ, ಕ್ರಿಶ್ಚಿಯನನ್ನರಿಗೆ ಟಿಕೆಟ್ ಕೊಟ್ಟಿದ್ದಾರಾ..? ಸಬ್ ಸಾತ್ ಸಬ್ ಕಾ ವಿಕಾಸ್ ಹೇಗಾಗುತ್ತೆ ಎಂದು ಮೋದಿ ವಿರುದ್ಧ ಗುಡುಗಿದರು.
ಮೋದಿ ಗುಜರಾತ್ ನಲ್ಲಿ ಗೆದ್ದಿದ್ದಾರೆ. ಆದ್ರೆ ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿ ಹಲವೆಡೆ ಗೆದ್ದಿದ್ದಾರಾ..?
ಮೋದಿ ಮಾಯಾ ಮಂತ್ರ ಮಾಡ್ತಾರಾ..? ಮೋದಿ ಕೇಳಿ ಮತ ಹಾಕ್ತಾರಾ..? ನಾನು ಉಡಾಫೆಯಿಂದ ಹೇಳ್ತಿಲ್ಲ. ರಾಜ್ಯಾದ್ಯಂತ ಸುತ್ತಾಡಿದ್ದೇನೆ ಎಲ್ಲ ಕಡೆ ಕಾಂಗ್ರೆಸ್ ಪರ ಗಾಳಿ ಇದೆ.
ಎಸ್ ಸಿ/ಎಸ್ ಟಿ ಅವ್ರಿಗೆ ಒಳ ಮೀಸಲಾತಿ, ಸದಾಶಿವ ಆಯೋಗ ತೀರ್ಮಾನ ಮಾಡಿದ್ದಿವಿ ಅಂತಾರೆ. ವೀರಶೈವ ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚಳ ಮಾಡಿದ್ದಿವಿ ಅಂತಾರೆ. ಹೇಗೆ ಮಾಡಿದ್ರಿ ಅದನ್ನ? ಮುಸಲ್ಮಾನರದ್ದು ಕಡಿಮೆ ಮಾಡಿ, ನಮಗೆ ಹೆಚ್ಚಳ ಮಾಡಿ ಕೊಡಿ ಅಂದ್ರಾ..?
ಮುಸಲ್ಮಾನರ 4% ರದ್ದು ಮಾಡಿ, ಲಿಂಗಾಯತ, ಒಕ್ಕಲಿಗರಿಗೆ ಹಂಚಿದ್ದಿರಲ್ವಾ.? ಅದು ಅನ್ಯಾಯ ಅಲ್ವಾ.? ನಾವೇ ನಾಗಮೋಹನ್ ದಾಸ್ ರಿಪೋರ್ಟ್ ಮಾಡಿದ್ದು. ಆದ್ರೆ ಇಂಪ್ಲಿಮೆಂಟ್ ಮಾಡಿಲ್ಲ.
ವಾಲ್ಮೀಕಿ ಸ್ವಾಮೀಜಿ ಇನ್ನೂರಕ್ಕು ಹೆಚ್ಚು ದಿನ ಉಪವಾಸ ಕುಳಿತ್ರು. ಆದ್ರೀಗ ಕೋರ್ಟ್ ನಲ್ಲಿ ಏನಾಗಿದೆ ಹಳೆವೆಲ್ಲಾ ಅಲ್ಲೇ ಇವೆ. ಒಳ ಮೀಸಲಾತಿ ಮಾಡಿದ್ದಿವಿ ಅಂತ ಟೋಪಿ ಹಾಕಿದ್ದಾರೆ. ಯಾರು ವಿರೋಧ ಮಾಡಿದ್ದಾರೋ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆಯ್ತು ಆದ್ರೆ ಅಫಿಡವಿಟ್ ಹಾಕಬೇಕಿತ್ತಲ್ಲ ಹಾಕಿಲ್ಲ
ಇದೆಲ್ಲಾ ಪಾಲಿಟಿಕಲ್ ಗಿಮಿಕ್.
ಮೀಸಲಾತಿ ಹೆಚ್ಚಳ ಅನ್ನೋದೇ ಚೀಟ್(ಮೋಸ) ನಾವು ಅಧಿಕಾರಕ್ಕೆ ಬಂದ್ರೆ ಮುಸಲ್ಮಾನರ 4% ಮೀಸಲಾತಿ ವಾಪಸ್ ಕೊಡುತ್ತೇವೆ. ಲಿಂಗಾಯತ, ಒಕ್ಕಲಿಗರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ವರದಿ: ವೀರೇಶ್ ಅರಮನಿ ವಾಯ್ಸ್ ಆಫ್ ಜನತಾ: