ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಹತ್ಯೆ ಘಟನೆ, ನ್ಯಾಯಾದೀಶ ಬಿ ಆರ್ ಗವಾಯಿ ಮೇಲೆ ಶೂ ಎಸೆದ ಘಟನೆ, ಚಾಮರಾಜ ನಗರದಲ್ಲಿ ಗೌತಮ್ ಬುದ್ದ ಹಾಗೂ ಅಂಬೇಡ್ಕರ್ ಪ್ರತಿಮೆ ಧ್ವಂಸ ಪ್ರಕರಣ, ರಾಜ್ಯದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ಖಂಡಿಸಿ ಸಂಘಟನೆಯಿಂದ ಪ್ರತಿಭಟನೆ.
ಮುದ್ದೇಬಿಹಾಳ ಬಂದ್ ಗೆ ಕರೆಗೆ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟಕ್ಕೆ ವ್ಯಾಪಕ ಬೆಂಬಲವನ್ನು ಪಟ್ಟಣದ ಎಲ್ಲಾ ವರ್ತಕರು ಹಿನ್ನೆಲೆ ಪಟ್ಟಣವು ಸಂಪೂರ್ಣ ಬಂದ್ ಯಶಸ್ವಿ.
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಹತ್ಯೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಬಂದ್ ಗೆ ಕರೆ ನೀಡಿದ್ದ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟಕ್ಕೆ ವ್ಯಾಪಕ ಬೆಂಬಲವನ್ನು ಪಟ್ಟಣದ ಎಲ್ಲಾ ವರ್ತಕರು ನೀಡಿದ ಶುಕ್ರವಾರ ಹಿನ್ನೆಲೆ ಬಂದ್ ಯಶಸ್ವಿಯಾಯಿತು.
ತಾಲೂಕಿನ ಗ್ರಾಮ ಒಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಹತ್ಯೆ ಮಾಡಿದ ಘಟನೆ ಹಾಗೂ ನ್ಯಾಯಾದೀಶ ಬಿ ಆರ್ ಗವಾಯಿ ಮೇಲೆ ಶೂ ಎಸೆದ ಘಟನೆ, ಚಾಮರಾಜ ನಗರದಲ್ಲಿ ಗೌತಮ್ ಬುದ್ದ ಹಾಗೂ ಅಂಬೇಡ್ಕರ್ ಪ್ರತಿಮೆ ಧ್ವಂಸ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ಖಂಡಿಸಿ ಶುಕ್ರವಾರ ಬಂದ್ ಗೆ ಕರೆ ನೀಡಲಾಗಿತ್ತು ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ನಾಲ್ಕು ದಿಕ್ಕುಗಳ ಸಂಚಾರ ಬಂದ್ ಮಾಡಿದ್ದರು. ಬೆಳಗ್ಗೆ 8 ಗಂಟ ಯಿಂದ ಮಧ್ಯಾಹ್ನ 3 ಗಂಟೆಗೆ ವರಗೆ ಬಸವೇಶ್ವರ ವೃತ್ತದಲ್ಲಿ ತಮಟೆ ಬಾರಿಸುತ್ತಾ ಪ್ರತಿಭಟಿಸಿದರು.
ಮಧ್ಯಾಹ್ನ 3 ಗಂಟೆಗೆ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು ಈ ವೇಳೆ ಮಾತನಾಡಿದ ಮುದ್ದೇಬಿಹಾಳ ಬಂದ್ ಗೆ ಕರೆ ನೀಡಿದ್ದ ದಲಿತ ಮುಖಂಡ ಹರೀಶ ನಾಟಿಕಾರ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೆ ಒಳಗಾದ ಬಾಲಕಿಯ ಕುಟುಂಬಕ್ಕೆ ಸರಕಾರದಿಂದ8.50 ಲಕ್ಷ ಪರಿಹಾರ ನೀಡಿದ್ದು ಈ ಪರಿಹಾರದ ಮೊತ್ತ 50 ಲಕ್ಷಕ್ಕೆ ಹೆಚ್ಚಿಸಿ ನೀಡಬೇಕು ಮತ್ತು ಎರಡು ಎಕರೆ ಜಮೀನು ಆ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿಯನ್ನು ತ್ವರಿತವಾಗಿ ಒದಗಿಸಬೇಕು ವಿಳಂಬ ಮಾಡಿದರೆ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹತ್ಯೆ ಆರೋಪಿತ ನಾಲ್ವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು .
ಶಿವು ಕನ್ನೂಳ್ಳಿ ಮಾತನಾಡಿ ದಲಿತ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರ ಹತ್ಯೆ ಪ್ರಕರಣದ ಪರಿಹಾರ ಮಾನದಂಡವನ್ನು ಗಜೆಟ್ ನಲ್ಲಿ ಅಧಿಸೂಚಿಸಿ 50 ಲಕ್ಷ ವರಗೆ ಹೆಚ್ಚಿಸಬೇಕು ಮತ್ತು ಜಿಲ್ಲೆಯಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ರಕ್ಷಣಾ ಸಮಿತಿ ಸಭೆಯನ್ನು ಕರೆಯದೆ ಇರುವುದು ಜಿಲ್ಲಾಡಳಿತದ ವೈಪಲ್ಯವಾಗಿದೆ ಎಂದರು.
ದಲಿತ ಮುಖಂಡರಾದ ಸಿ.ಜಿ ವಿಜಯಕರ, ಆನಂದ ಮುದೂರ, ಪ್ರಕಾಶ ಚಲವಾದಿ ಅತ್ಯಾಚಾರಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಗೆ ಒಳಪಡಿಸಬೇಕು ಇಂತಹ ಘಟನೆ ಮರುಕಳಸದಂತೆ ಕಠಿಣ ಕಾನೂನು ರೂಪಸಬೇಕೆಂದು ಒತ್ತಾಯಿಸಿದರು.
ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ನೀಡಲಾಯಿತು.
ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ, ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿ ದಲಿತರ ಮೇಲೆ ದೌರ್ಜನ್ಯ ಇಂದು ನಿನ್ನೆಯದಲ್ಲ ಅಂಬೇಡ್ಕರ್ ಅವರ ಇದ್ದಾಗಿನಿಂದಲೂ ನಡೆದಿದೆ ಅವರನ್ನು ನಾವು ಹೇಗೆ ನಡೆದುಕೂಂಡೆವು ಎಂದು ಆಲೋಚಿಸಬೇಕು ಅವರನ್ನು ಚುನಾವಣೆಯಲ್ಲಿ ಸೋಲಿಸಿಲಾಯಿತು ಅವರ ಮೃತಪಟ್ಟಾಗ ಗೌರವಯುತ ಅಂತ್ಯಸಂಸ್ಕಾರ ಸಹ ಮಾಡಲಿಲ್ಲವೆಂದು ವಿಷಾದಿಸಿದ ಅವರು ಈಗ ಅತ್ಯಾಚಾರಿಗಳ ಮೇಲೆ ಕಠಿಣ ಕಾನೂನು ರಚಿಸಲಾಗಿದೆ ಎಂತಹ ಪ್ರಭಾವಿಯಾಗಿದ್ದರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದರು.
ದಲಿತ ಹಿರಿಯ ಮುಖಂಡ ಡಿ.ಬಿ ಮುದೂರ, ಸದ್ದಾಂ ಕುಂಟೋಜಿ, ರಫಿಕ ಶಿರೋಳ ಸೇರಿದಂತೆ ವಿವಿಧ ದಲಿತಪರ ಮುಖಂಡರು ಮಾತನಾಡಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿದರು ಹಾಗೂ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಹತ್ಯೆಯ ಆರೋಪಿಗಳಿಗೆ ಗಲ್ಲು ಶಿಕ್ಷೆ ಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು .
ಪ್ರತಿಭಟನೆಯಲ್ಲಿ ಎಸ್ ಎಂ ನೇರಬೆಂಚಿ, ಮಲ್ಲು ತಳವಾರ, ಪರಶುರಾಮ ಮುರಾಳ,ಪ್ರಶಾಂತ ಚಲವಾದಿ,ರೇವಣ್ಣಪ್ಪ ಚಲವಾದಿ, ಪರಶುರಾಮ ನಾಲತವಾಡ, ಸಂಗಮೇಶ ನಾಲತವಾಡ, ಶೇಖರ ಢವಳಗಿ, ದುರ್ಗಪ್ಪ ವಡ್ಡರ, ಬಲರಾಮ ನಾಯಕಮಕ್ಕಳ, ಹುಲಗಪ್ಪ ನಾಯಕಮಕ್ಕಳ, ಬಸವರಾಜ ಭಜಂತ್ರಿ, ಪ್ರಕಾಶ ಕಾಳೆ, ಆನಂದ ದೇವೂರ, ಸಂಗಯ್ಯ ಸಾರಂಗಮಠ, ಸಂಗು ಚಲವಾದಿ,ಮುತ್ತು ಚಲವಾದಿ, ಸಿದ್ದಪ್ಪ ಚಲವಾದಿ,ಬಸವರಾಜ ಚಲವಾದಿ, ಸೇರಿದಂತೆ ವಿವಿಧ ದಲಿತಪರ ಮುಖಂಡರು ಪ್ರಗತಿಪರ ಚಿಂತಕರು ಪಟ್ಟಣದ ನಾಗರಿಕರು ಯುವಕರು ಭಾಗವಹಿಸಿದ್ದರು.
ಮುದ್ದೇಬಿಹಾಳ ಬಂದ್ ಬಿಸಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರು ಪರದಾಡಿದರು, ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ಆಸ್ಪತ್ರೆ ಗೆ ಹೋಗಲು ಪಟ್ಟಣ ಸುತ್ತಿ ಸಾಗಿದರೇ ಹೋಟೆಲ್ ಚಹಾದ ಅಂಗಡಿ ಎಲ್ಲಾ ಸ್ತಬ್ಧ ಕಾರಣ ಕುಡಿಯುವ ನೀರು ಆಹಾರಕ್ಕೆ ಪ್ರಯಾಣಿಕರು ಪರದಾಡಿದ ದೃಶ್ಯಗಳು ಕಂಡು ಬಂದವು ಆಟೋ ಕ್ರೋಸರ್ ವಾಹನಗಳು ಸಂಚಾರ ನಿಲ್ಲಿಸಿದ್ದವು, ಅನೇಕ ಶಾಲಾಕಾಲೇಜುಗಳು ಸ್ವಯಂ ರಜೆ ನೀಡಿದ್ದವು, ಸಾರಿಗೆ ಸಂಚಾರ,ನೀಡಿದ ಬಂದ್ ಸಂಪೂರ್ಣ ಶಾಂತಯುತವಾಗಿ ಯಶಸ್ವಿಯಾಯಿತು.