ಲಿಂಗಸೂಗೂರು: ವಿಶ್ವದರ್ಶನ ಕರಿಯರ್ ಅಕಾಡೆಮಿ ಧಾರವಾಡ ವತಿಯಿಂದ ಮುದಗಲ್ ಪಟ್ಟಣದಲ್ಲಿರುವ ಅನ್ನದಾನಗೌಡ ಬಯ್ಯಾಪೂರ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ವಿಶ್ವದರ್ಶನ್ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ವಿಠಲ್ ದೊಡ್ಡಮನಿ ಯವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಮತ್ತು ಅಭ್ಯಾಸ ಕ್ರಮ ಯಾವ ರೀತಿಯಲ್ಲಿ ಇರಬೇಕು ಎಂದು ಮಾರ್ಗದರ್ಶನ ನೀಡಿದರು.
ನಂತರ ಅಕಾಡೆಮಿಯ ಇತಿಹಾಸ ಉಪನ್ಯಾಸಕರಾದ ನಾಗರಾಜ ಮಜ್ಜಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸುಧೀರ್ಘ ಉಪನ್ಯಾಸವನ್ನು ನೀಡಿದರು. ಅಧ್ಯಕ್ಷೀಯ ಭಾಷಣವನ್ನು ಶ್ರೀ ಪ್ರಭಾಕರ ಹೆಚ್ ಕಮ್ಮಾರ ಕನ್ನಡ ಉಪನ್ಯಾಸಕರು ಮಾಡಿದರು.
ಈ ಸಂದರ್ಭದಲ್ಲಿ ಯಂಕರಡ್ಡಿ ಹೆಚ್ ಕಮತರ, ಆನಂದ ಗುತ್ತೇದಾರ್, ಬಸವರಾಜ ಹೆಚ್ ಕಮ್ಮಾರ, ಈಶಪ್ಪ ಬಿ ಚಲವಾದಿ, ಕು. ಸುಮಯ್ಯ ಬಾನು ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.