ರಾಯಚೂರು – ಗುರುಪುಟ್ಟ ಕಲಾಬಳಗ (ರಿ) ಅಸ್ಕಿಹಾಳ ರಾಯಚೂರು ಅರ್ಪಿಸುವ ಹಳ್ಳಿ ಪ್ರತಿಭೆಗಳ ಕಲೋತ್ಸವ ವತಿಯಿಂದ ‘ಗಾನ ಹಾಸ್ಯ ನೃತ್ಯೋತ್ಸವ‘ ಸಾಂಸ್ಕೃತಿಕ ಲಹರಿ ಕಾರ್ಯಕ್ರಮವನ್ನು ಫೆ.೨೬ ರಂದು ಸಂಜೆ ೬ ಗಂಟೆಗೆ ದೇವದುರ್ಗ ತಾಲೂಕಿನ ಶ್ರೀ ಕರಿಗೂಳಿ ದೇವಸ್ಥಾನದ ಆವರಣ, ಸುಂಕೇಶ್ವರಹಾಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾನಿಧ್ಯವನ್ನು ಗಬ್ಬೂರಿನ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಉದ್ಘಾಟಿಸಲಿದ್ದಾರೆ. ಹಳ್ಳಿ ಪ್ರತಿಭಾ ವೇದಿಕೆಯಲ್ಲಿ ಸುಗಮ ಸಂಗೀತ, ಹಾಸ್ಯ ನಗೆ, ವಾದ್ಯ, ಚಿತ್ರಕಲೆ, ಸಮೂಹ ನೃತ್ಯ, ಜಾನಪದ ನೃತ್ಯ ಹಾಗೂ ಕಿರು ನಾಟಕವನ್ನು ಹಮ್ಮಿಕೊಳ್ಳಲಾಗಿದೆಂದು ಗುರುಪುಟ್ಟ ಕಲಾಬಳಗ ಅಧ್ಯಕ್ಷರಾದ ಸುಧಾರಕ ಅಸ್ಕಿಹಾಳ ಅವರು ತಿಳಿಸಿದ್ದಾರೆ.