ಇಂಡಿಯಲ್ಲಿ ವಿದ್ಯಾರ್ಥಿಗಳ ಅಣುಕು ವಿಧಾನಸಭೆ..!
ಇಂಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂಡಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಅಣುಕು ವಿಧಾನಸಭೆ ಅಧಿವೇಶನ ಕಾಲೇಜಿನಲ್ಲಿ ನಡೆಯಿತು.
ಅಣುಕು ವಿಧಾನಸಭೆ ಅಧಿವೇಶನ ಎಲ್ಲರ ಮನಸ್ಸು ಗೆಲ್ಲುವಂತೆ ಅತ್ಯುತ್ತಮವಾಗಿ ವಿಧಾನಮಂಡಲ ಅಧಿವೇಶನದಂತೆಯೇ ವಿದ್ಯಾರ್ಥಿಗಳು ನಡೆಸಿಕೊಟ್ಟು ಪಾಲ್ಗೊಂಡರು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುರೇಖಾ ವಾರದ್, ಹಾಗೂ ಶಶಿಕಾಂತ್ ಹಾವಳಗಿ ಮಾರ್ಗದರ್ಶನದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಸುಂದರವಾದ ಅಣುಕು ವಿಧಾನಸಭೆ ಅಧಿವೇಶನ ನಡೆಸಿದರು .
ಸವಿತಾ ಪೂಜಾರಿ ರಾಜ್ಯಪಾಲರಾಗಿ, ಅರುಣ್ ಕುಮಾರ್ ಬಡಿಗೇರ್ ಸಭಾಪತಿಯಾಗಿ, ತುಕರಾಮ್ ಹೊನಕೋರೆ ಮುಖ್ಯಮಂತ್ರಿಯಾಗಿ, ಬಸವರಾಜ್ ಕಲಶೆಟ್ಟಿ ಗೃಹ ಸಚಿವರಾಗಿ, ಆಕಾಶ ಹಡಪದ ಕಂದಾಯ ಸಚಿವರಾಗಿ ಹಾಗೂ ಸುರೇಶ್ ತಳಕೇರಿ ವಿರೋಧ ಪಕ್ಷದ ನಾಯಕ, ಸಚಿನ್ ಬಡಿಗೇರ್ ಅನೇಕ ವಿದ್ಯಾರ್ಥಿಗಳು ಸಚಿವರ ವಿರೋಧ ಪಕ್ಷದ ಶಾಸಕರ ಪಾತ್ರಗಳನ್ನು ನಿಭಾಯಿಸಿದರು.
ಅಣುಕು ಪ್ರದರ್ಶನದಲ್ಲಿ ತುಕಾರಾಮನು ಹೊನಕೋರೆ ಬಜೆಟ್ ಮಂಡನೆ ಮಾಡುವುದು, ವಿರೋಧ ಪಕ್ಷದ ನಾಯಕ ಪ್ರಶ್ನೆ ಕೇಳುವಂಥದ್ದು ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷದ ಮುಖಂಡರಿಗೆ ಪ್ರಶ್ನೆ ಕೇಳುವಂಥದ್ದು ತುಂಬಾ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಅಣುಕು ವಿಧಾನಸಭೆಯಲ್ಲಿ ಚೆರ್ಚೆ ಮಾಡಿದರು.
ಪ್ರಾಚಾರ್ಯ ರಮೇಶ್.ಆರ್.ಎಚ್ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಪ್ರಾಮುಖ್ಯತೆ ಅರ್ಥೈಸಿಕೊಳ್ಳುವುದು ಬಹಳ ಉತ್ತಮವಾದದ್ದು, ವಿದ್ಯಾರ್ಥಿಗಳಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸುವ ಹೊರತೆಗೆಯುವ ಕೆಲಸ ಪ್ರಾಧ್ಯಾಪಕರದ್ದಾಗಿರುತ್ತದೆ. ಆದ ಕಾರಣ ಸರ್ಕಾರಿ ಕಾಲೇಜಿನಲ್ಲಿ ಪಠ್ಯ ಪಠ್ಯತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳು ಭಾಗವಹಿಸುವದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಇವತ್ತಿನ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮ ಬೇಕೆಂದು ಹೇಳಿದರು.
ಪ್ರಾಧ್ಯಾಪಕರ ಕಿರಣಕುಮಾರ ರೇವಣಕರ್, ಪುಷ್ಪಲತಾ ಆರ್, ಶಿರಿನ್ ಸುಲ್ತಾನ ಇನಾಮದಾರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.