ಕ್ಲಸ್ಟರ್ ಮಟ್ಟದ ಗಣಿತ ಕಲಿಕಾ ಆಂದೋಲನ
ಇಂಡಿ: ತಾಲೂಕಿನ ಚಿಕ್ಕಬೇವನೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಮಕ್ಕಳ ಗಣಿತ ಕಲಿಕೆಯ ಸ್ಪರ್ಧೆಯನ್ನು ಚಿಕ್ಕಬೇವನೂರ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರ ಕ್ಲಸ್ಟರ್ ಮಟ್ಟದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾ ಪಂ ಅಭಿವೃಧ್ಧಿ
ಅಧಿಕಾರಿ ಮಂಜುನಾಥ ಡೊಳ್ಳಿ ಮಾತನಾಡಿ, ಯಾವ ವಿಶ್ವ ವಿದ್ಯಾಲಯವೂ ಕಲಿಸದ ಪಾಠವನ್ನು ಬಡತನ
ಕಲಿಸುತ್ತದೆ. ಪ್ರಾಥಮಿಕ ಹಂತದಲ್ಲಿಗಣಿತ
ವಿಷಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಗಣಿಕ
ಕಲಿಕಾ ಆಂದೋಲನ ಹಮ್ಮಿಕೊಂಡಿದ್ದುಸತತ ಅಭ್ಯಾಸದಿಂದ ಗಣಿತ ಲೆಕ್ಕಗಳನ್ನು ನಿರರ್ಗಳವಾಗಿ ಮಾಡಬಹುದು ಎಂದರು.
ಸಿ.ಆರ್.ಪಿ ಎಂ.ಎಲ್. ಹಡಲಸಂಗ ಅವರು ಮಾತನಾಡಿ,, ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸೊತ್ತಲ್ಲ. ಗಣಿತ ವಿಷಯದ ಬಗ್ಗೆ ಇರುವ
ಭಯವನ್ನು ಹೋಗಲಾಡಿಸಲು ಸರಕಾರ ಹಾಗೂ
ಸರ್ಕಾರೇತರ ಸಂಘ ಸಂಸ್ಥೇಗಳು ಗಣಿತ ಕಲಿಕಾ
ಆಂದೋಲನ ಎಂಬ ವಿಶಿಷ್ಠ ಕಾರ್ಯಕ್ರಮ ರೂಪಿಸಿವೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಶಿಕ್ಷಕಿ ಸರೋಜನಿ ಮಾವಿನಮರ ಮಾತನಾಡಿ, ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ವಿದ್ಯಾರ್ಥಿಗಳ ಬೌಧ್ಧಿಕ ಮಟ್ಟ ವೃಧ್ಧಿಯಾಗಲು ನೆರವಾಗುತ್ತದೆ. ಗಣಿತ ಎಂದರೆ ಕಬ್ಬಿಣದ ಕಡಲೆ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಭೋಧಿಸುವ ಕುರಿತು ಶಿಕ್ಷಕರಿಂದ ನಿರಂತರವಾಗಿ ಪ್ರಯತ್ನಗಳ ನಡೆಯುತ್ತಿವೆ ಎಂದರು.
ಗ್ರಾ.ಪಂ ಅಧ್ಯಕ್ಷೆ ಸುನೀಲ ಚವ್ಹಾಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ಮೇಲಿನಮನಿ, ಶಿಕ್ಷಕ ಎನ್.ಬಿ. ದೇಶಮುಖ, ಆರ್.ಎಂ. ಮುಜಾವರ, ಕೆ ರ್. ಅವಟಿ, ಎ.ಜಿ. ಆನೆಗುಂದಿ, ದ್ರಾಕ್ಷಾಯಿಣಿ ಕೋಳಿ,
ನಿರೂಪಣೆಯನ್ನು ಸರೋಜನಿ ಮಾವಿನಮರ, ಸ್ವಾಗತ-
ಪರಿಚಯವನ್ನು ಆರ್.ವಿ. ಹಿರೇಮಠ, ವಂದನಾರ್ಪಣೆ – ಯನ್ನು ಶಾರದಾ ಗಿರಣಿ ನೆರವೇರಿಸಿದರು. ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು,
ಗ್ರಾಮಸ್ಥರು ಹಾಜರಿದ್ದರು.
ಇಂಡಿ: ಚಿಕ್ಕಬೇವನೂರ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರ ಕ್ಲಸ್ಟರ್ ಮಟ್ಟದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಲೆಕ್ಕ ಬಿಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.