ಲಿಂಗಸೂಗೂರು: ತಾಲೂಕಿನ ಜಲದುರ್ಗ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ, ಸ್ಥಳ ಪರಿಶೀಲನೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸರೆ ಹಿಡಿಯಲು ಬೋನ್ ಹಾಕಿದ್ದಾರೆ. ಇನ್ನ ಸುತ್ತ ಮುತ್ತಲ ಗ್ರಾಮಸ್ಥರು ಎಚ್ಚರಿಕೆಯಿಂದ ಹೊಲಗಳಿಗೆ ತೆರಳಲು ಸೂಚಿಸಿದ್ದಾರೆ.
ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಲದುರ್ಗದ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪಪ್ಪಾಯಿ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಾದ ಯಾದವಕುಮಾರ ಉಪ ವಲಯ ಅರಣ್ಯ ಅಧಿಕಾರಿ, ಸಂತೋಷ್ ಕರ್ನಾಳ, ಹಾಗೂ ಹುಲ್ಲಪ್ಪ, ಹುಚ್ಚಪ್ಪ, ಹನುಮಂತ ಅರಣ್ಯ ರಕ್ಷಕ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದರು.
ಕಳೆದ ಎರಡು ದಿನಗಳ ಹಿಂದೆ ಹಂಚಿನಾಳ ಗ್ರಾಮದ ಅಮರೇಶ ಎಂಬುವರ ಜಮೀನಿನಲ್ಲಿ
ಚಿರತೆ ನಾಯಿಮರಿಯನ್ನು ಹೊತ್ತೊಯ್ಯಿದಿದೆ. ಹಾಗಾಗಿ ಅರಣ್ಯಾಧಿಕಾರಿಗಳು ಹಂಚಿನಾಳ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಸೆರೆ ಹಿಡಿಯಲು ಬೋನನ್ನು ಇಟ್ಟಿದ್ದಾರೆ.
ಇನ್ನು ಜಲದುರ್ಗ ಹಾಗೂ ಹಂಚಿನಾಳ ಸುತ್ತ ಮುತ್ತ ಅರಣ್ಯ ಪ್ರದೇಶವಿರುವದರಿಂದ ಚಿರತೆ ಆಹಾರ ಹರಸಿ ಬಂದಿರಬಹುದು ಜನರು ಜಾಗೃತೆಯಿಂದ ಜಮೀನುಗಳಿಗೆ ತೆರಳಿ ಕೆಲಸ ಕಾರ್ಯಗಳನ್ನು ಮಾಡಲು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.