ಮಕ್ಕಳು ಅಂಕಗಳ ಬೆನ್ನು ಹತ್ತದೇ ಮೌಲ್ಯ ಶಿಕ್ಷಣದತ್ತ ಒಲವು ತೋರಿಸಿ
ಇಂಡಿ: ಸ್ಕೌಟ್ಸ್, ಗೈಡ್ಸ್ ನಂತಹ ಸಂಸ್ಥೆಗಳು ಮಕ್ಕಳಲ್ಲಿ ಸೇವಾ ಮನೋಭಾವ, ಶಿಸ್ತು ಬೆಳೆಸಲು ಸಹಾಯ ಮಾಡುತ್ತವೆ ಎಂದು ಭಾರತ ಸ್ಕೌಟ್ಸ್ ,ಗೈಡ್ಸ್ ತಾಲೂಕ ಸಂಸ್ಥೆ ಇಂಡಿಯ ಅಧ್ಯಕ್ಷರು ಹಾಗೂ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣನವರ ಹೇಳಿದರು.
ಅವರು ಶನಿವಾರದಂದು ತಾಲೂಕಿನ ಝಳಕಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ವಿಜಯಪುರ, ತಾಲೂಕ ಸಂಸ್ಥೆ ಇಂಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಇಂಡಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಝಳಕಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪ ೨೫ನೇ ಸಾಲಿನ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಹಾಗೂ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಜಗದೀಶ ಬೋಳಸುರ ಮಾತನಾಡಿ,ಮಕ್ಕಳು ಅಂಕಗಳ ಬೆನ್ನು ಹತ್ತದೇ ಮೌಲ್ಯ ಶಿಕ್ಷಣದತ್ತ ಒಲವು ತೋರಿಸಿ ಸಮಾಜದಲ್ಲಿ ಉತ್ತಮ ನಾಗರಿಕತೆ ಹೊಂದಬೇಕು ಎಂದು ಹೇಳಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ಅರುಣ ನಾಯ್ಕೋಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ತರಬೇತಿ ಆಯುಕ್ತ ಎಸ್ ಎಸ್ ಬೊಮ್ಮನಹಳ್ಳಿ, ಇಂಡಿ ತಾಲೂಕ ಕಾರ್ಯದರ್ಶಿ ಎಸ್ ಬಿ ಪಾಟೀಲ, ತರಬೇತಿ ನಾಯಕರಾಗಿ ಸಂಗಮೇಶ ಬಂಡೆ, ಪ್ರೀತಿ ಕಾಳೆ ಇದ್ದರು. ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೇಮಾ ನಾಯ್ಕೊಡೆ, ಸ್ಕೌಟ್ ಮಾಸ್ಟರ್ ವೈ ಎಂ ಬಾಗೇವಾಡಿ,ರಾಹುಲ ಚವ್ಹಾಣ, ಡಿ ಎಸ್ ಮೋಮಿನ, ಸುರೇಖಾ ಲಮಾಣ , ಶ್ರೀದೇವಿ ಜೀರಗಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ೨೦೨೪ ೨೫ನೇ ಸಾಲಿನ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಹಾಗೂ ಸಂಸ್ಥಾಪಕರ ದಿನಾಚರಣೆಯನ್ನು ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣನವರ ಉದ್ಘಾಟಿಸಿದರು.