ಇಂಡಿ : ಹುಟ್ಟಿನಿಂದ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆಗಳು ಹಾಕಿಸಿ ಲಸಿಕೆಗಳು ಮಕ್ಕಳಿಗೆ ಜೀವ ರಕ್ಷಕ. ಲಸಿಕೆಗಳು ಮಾರಕ ಕಾಯಿಲೆ ತಡೆಗಟ್ಟಲು ಮುಂಜಾಗ್ರತೆಗಾಗಿ ಮತ್ತು ಕುಟುಂಬದ ಆರ್ಥಿಕ ಹೊರೆ ಆಗದಂತೆ ಮಕ್ಕಳ ನೋವಿನೊಂದಿಗೆ ಆಸ್ಪತ್ರೆಗೆ ಅಲೆದಾಡದಂತೆ ಲಸಿಕೆಗಳು ಹಾಕಿಸಬೇಕೆಂದು ” ಜೊತೆಗೆ ಸರಕಾರ ಜೋತೆ ಕೈ ಜೋಡಸಿ ಎಂದು ಹೇಳಿದರು.
ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮದ ಬಗಲಿ ಅಡವಿ ವಸ್ತಿ ಬೆನಕಪ್ಪನ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ” ಮಿಷನ್ ಇಂದ್ರಧನುಷ್” ಕಾರ್ಯಕ್ರಮಕ್ಕೆ ಅಪ್ಪಾ ಸಾಹೇಬ್ ಹೊಸಮನೆ ಚಾಲನೆ ನೀಡಿ ಲಸಿಕೆಗಳು ಹಾಕುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ ಮಕ್ಕಳ ಜೀವ ಉಳಿಸಿ ಎಂದು ಹೇಳಿದರು.

ಡಾ ಪ್ರಶಾಂತ್ ದೊಮ್ಮಗೊಂಡ ಮಾತನಾಡಿ, ಇಂಡಿ ತಾಲೂಕಿನ ಜನ ಜೀವನೋಪಾಯ ವ್ಯವಸಾಯಕ್ಕಾಗಿ ಅಡವಿ ವಸ್ತಿಗಳ ಮನೆಗಳಲ್ಲಿರುವ ಹುಟ್ಟಿನಿಂದ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆಗಳು ಹಾಕಿಸಿ ಲಸಿಕೆಗಳು ಮಕ್ಕಳಿಗೆ ಜೀವ ರಕ್ಷಕ. ಲಸಿಕೆಗಳು ಮಾರಕ ಕಾಯಿಲೆ ತಡೆಗಟ್ಟಲು ಮುಂಜಾಗ್ರತೆಗಾಗಿ ಮತ್ತು ಕುಟುಂಬದ ಆರ್ಥಿಕ ಹೊರೆ ಆಗದಂತೆ ಮಕ್ಕಳ ನೋವಿನೊಂದಿಗೆ ಆಸ್ಪತ್ರೆಗೆ ಅಲೆದಾಡದಂತೆ ಲಸಿಕೆಗಳು ಹಾಕಿಸಬೇಕೆಂದು ಕಿವಿಮಾತು ಹೇಳುತ್ತಾ ಆರು ಮಾರಕ ರೋಗಗಳ ವಿರುದ್ಧ ಹೋರಾಟ ಮಾಡುವ ಒಂದೇ ಪೆಂಟ ಲಸಿಕೆ ತೊಡೆ ಮಧ್ಯ ಭಾಗದಲ್ಲಿ ನೀಡಿದಾಗ ಮಗುವಿಗೆ ನೋವಾಗಬಹುದು, ಅಳಬಹುದು, ಗಂಟಾಗಬಹುದು, ಭಯ ಬೇಡ ಲಸಿಕೆ ಹಾಕಿಸಿ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಮ್. ಪೂಜಾರಿ ಮಾತನಾಡಿ ಮಕ್ಕಳಿಗೆ ಹುಟ್ಟಿದಾಗ ಬಿಸಿಜಿ ಲಸಿಕೆ ಬಾಲ್ಯ ಕ್ಷಯರೋಗ. ಪೇಂಟ್.ಲಸಿಕೆ ಮಗುವಿಗೆ ಗಂಟಲು ಮಾರಿ.ಗಂಟಲಿಗೆ ಹುಣ್ಣಾಗುವುದು ನಾಯಿ ಕೆಮ್ಮು. ಧನುರ್ ವಾಯು. ಕಾಮಲೆ ರೋಗ. ಹಿಬ. ಕಾಯಿಲೆಗಳು ತಡೆಗಟ್ಟುತ್ತದೆ. ರೋಟ ಲಸಿಕೆ ಮಗುವಿನ ತೀವ್ರತರ ಭೇದಿ ತಡೆಗಟ್ಟುತ್ತದೆ ಎರಡು ಹನಿ ಪೋಲಿಯೋ ಪಾರ್ಶ್ವ ವಾಯು ಅಂಗವಿಕಲತೆ ತಡೆಗಟ್ಟುತ್ತದೆ. ಒಂದುವರಿ ಎರಡೂವರೆ ಮೂರುವರೆ ತಿಂಗಳಲ್ಲಿ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು 9ನೇ ತಿಂಗಳಿಗೆ ಮಗುವಿಗೆ ದಡಾರ ಲಸಿಕೆ ಗೊಬ್ಬರ ಕಾಯಿಲೆ ಬರದಂತೆ ತಡೆಗಟ್ಟುತ್ತದೆ ವಿಟಮಿನ್ ಎ ದ್ರಾವಣ ನೀಡುವುದರಿಂದ ಮಕ್ಕಳ ರಾತ್ರಿ ಕುರುಡುತನ ಇರುಳುಗಣ್ಣು ತಡೆಗಟ್ಟುತ್ತದೆ ಚರ್ಮ ಕಾಂತಿಮಯವಾಗಿ ಹೊಳೆಯುತ್ತದೆ. ಮಗುವಿನ ದೇಹದ ಬೆಳವಣಿಗೆ ಸಮತೋಲನ ಆಹಾರ ಮಗುವಿಗೆ ಸಕಾಲಕ್ಕೆ ಈ ಎಲ್ಲಾ ಲಸಿಕೆಗಳು ಕೊಡಿಸಲು ಕಳಕಳಿ ವ್ಯಕ್ತಪಡಿಸಿದರುಪ್ರಸ್ತುತ ಸಂದರ್ಭದಲ್ಲಿ ಅಪ್ಪಾಸಾಬ ಹೊಸಮನಿ, ಪಿಕೆಎಂಎಸ್ ಅಧ್ಯಕ್ಷರು ಚಾಲನೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ. ಎಸ್ ಹೆಚ್. ಅತನೂರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿದ್ಯಾಶ್ರೀ, ಸಮುದಾಯ ಆರೋಗ್ಯ ಅಧಿಕಾರಿ ಶಂಕರ್, ಆಶಾ ಕಾರ್ಯಕರ್ತೆ ಮಂಗಲ ಅನಿತಾ. ಅಂಗನವಾಡಿ ಕಾರ್ಯಕರ್ತೆ ಸುಜಾತ ಉಪಸ್ಥಿತರಿದ್ದರು.