ವಿಜಯಪುರ : ಅಂಗಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಎರಡು ಅಂಗಡಿಗಳಿಗೆ ಮಹಾನಗರ ಪಾಲಿಕೆಯು ಅಧಿಕಾರಿಗಳು ಅಂಗಡಿಗಳಿಗೆ ಬೀಗ್ ಹಾಕಿರುವ ಘಟನೆ ವಿಜಯಪುರ ನಗರದ ಬಾಗಲಕೋಟ ಕ್ರಾಸ್ ಬಳಿ ನಡೆದಿದೆ. ಮಹಾನಗರ ಪಾಲಿಕೆ ಅರೋಗ್ಯ ನಿರೀಕ್ಷಕರಿಗೆ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡದ ಚಿಕನ್ ಮಾರಾಟ ಅಂಗಡಿ ಮೇಲೆ ದಾಳಿ ಮಾಡಿ 2 ಅಂಗಡಿ ಸೀಜ್ ಮಾಡಿದ್ದಾರೆ. ಇನ್ನೂ ಪಾಲಿಕೆ ಆಯುಕ್ತ ಸೌದಾಗರ್ ಆದೇಶದ ಮೇಲೆ ಈ ಕ್ರಮ ಕೈಗೊಂಡಿದ್ದಾರೆ. ಇದಕ್ಕೂ ಮೊದಲು ಸ್ವಚ್ಛತೆಗೆ ಆದ್ಯತೆ ನೀಡುವಂತೆ ನೋಟೀಸ್ ನೀಡಲಾಗಿತ್ತು. ಆದ್ರೇ, ಯಾವುದೇ ಬದಲಾವಣೆ ಮಾಡಿಲ್ಲ. ಅದಕ್ಕಾಗಿ ಅಂಗಡಿಗಳಿಗೆ ಬೀಗ್ ಜಡಿದಿದ್ದಾರೆ. ಅರೋಗ್ಯ ನಿರೀಕ್ಷರಾದ ಸಂಜೀವ್ ಅಥಣಿ ಸೇರಿದಂತೆ ಅಧಿಕಾರಿಗಳು ಇದ್ದರು