ಡಿ-9-10 ರಂದು ಲಚ್ಯಾಣ ಗ್ರಾಮದಲ್ಲಿ ಶ್ರೀ ಮಲ್ಲಯ್ಯ ದೇವರ ಛಟ್ಟಿ ಜಾತ್ರಾ ಮಹೋತ್ಸವ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಆರಾದ್ಯ ದೇವ ಶ್ರೀ ಮಲ್ಲಯ್ಯ ದೇವರ ಛಟ್ಟಿ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ ಡಿಸೆಂಬರ್ ೯ ಹಾಗೂ ೧೦ ರಂದು ಆಯೋಜಿಸಲಾಗಿದೆ.
ಡಿ. ೯ರ ಸೋಮವಾರದಂದು ನಸುಕಿನ ಜಾವ ೫ ಗಂಟೆಗೆ ದೇವಸ್ಥಾನದಲ್ಲಿ ಗ್ರಾಮದ ಭಕ್ತರಿಂದ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಸಂಜೆ ೭ ಗಂಟೆಗೆ ವಾದ್ಯಮೇಳದೊಂದಿಗೆ ಗ್ರಾಮದ ಸಂಪ್ರದಾಯದAತೆ ನಂದಿಕೋಲಿಗೆ ಚೆಂಡು ಹೂ ಏರಿಸುವ ಕಾರ್ಯಕ್ರಮ ಸಂಭ್ರಮದಿAದ ನಡೆಯಲಿದೆ. ಬಳಿಕ ಮಹಾಮಂಗಳಾರತಿ ನೆರವೇರಲಿದೆ. ನಂತರ ರಾತ್ರಿ ೮ ಗಂಟೆಗೆ ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿAದ ಭಜನಾ ಪದ ಕಲೆ ಪ್ರದರ್ಶನ ನಡೆಯಲಿದೆ.
ಡಿ. ೧೦ರ ಮಂಗಳವಾರದAದು ನಸುಕಿನ ಜಾವ ೪ ಗಂಟೆಗೆ ಮಲ್ಲಯ್ಯ ದೇವರಿಗೆ ಅಭಿಷೇಕ, ಅಕ್ಕಿ, ಬೆಲ್ಲ, ಬೇಳೆ ಧಾನ್ಯದಿಂದ ಪೂಜೆ, ಎಲೆ ಪೂಜೆ ನಡೆಯಲಿದೆ. ಬಳಿಕ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ೭ ಗಂಟೆಗೆ ಊರ ಒಳಗಿನ ದೇವಸ್ಥಾನದಿಂದ ಊರ ಹೊರಗಿನ ಮಲ್ಲಯ್ಯ ದೇವಸ್ಥಾನದ ವರೆಗೆ ವಾದ್ಯ ಮೇಳ, ನಂದಿಕೋಲ ಮೆರವಣ ಗೆಯೊಂದಿಗೆ ಶ್ರೀ ಮಲ್ಲಯ್ಯ ದೇವರ ಉತ್ಸವ ಮೂರ್ತಿಯ ಮೆರವಣ ಗೆ ದೇವರ ಭೇಟಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಪಾಲಕಿಯ ಪುರ ಪ್ರವೇಶ ಕಾರ್ಯಕ್ರಮ ವಿಜ್ರಂಭಣೆಯಿAದ ವಾದ್ಯ ಮೇಳದೊಂದಿಗೆ ಸರಳ ಸಂಪ್ರದಾಯಕವಾಗಿ ನಡೆಯುವದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
ಇಂಡಿ: ತಾಲೂಕಿನ ಲಚ್ಯಾಣದ ಶ್ರೀ ಮಲ್ಲಯ್ಯ ದೇವರ ಕತೃ ಗದ್ದುಗೆ.