ಚಾಂಪಿಯನ್ಸ್ ಟ್ರೋಫಿ 2025 : ಬಾಂಗ್ಲಾ ವಿರುದ್ಧ ಶುಭಾರಂಭ ಮಾಡಿದ ಭಾರತ
Champions Trophy:
Voiceofjanata DesK Sports News: ನಡೆದ ಚಾಂಪಿಯನ್ಸ್ ಟ್ರೋಪಿ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ದೇಶದ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಇದೇ ವೇಳೆ ಟೀಂ ಇಂಡಿಯಾ ತಂಡದ ವೇಗಿ ಮೊಹಮ್ಮದ್ ಶಮಿ ಹಾಗೂ ವಿರಾಟ್ ಕೊಹ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಎಂಟು ರಾಷ್ಟ್ರಗಳು ಪಾಲ್ಗೊಂಡಿರುವ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಬಾಂಗ್ಲಾದೇಶದ ವಿರುದ್ದ ಆರು ವಿಕೆಟ್ ಗಳ ಜಯ ಸಾಧಿಸಿದೆ. ಭಾರತದ ಮುಂದಿನ ಪಂದ್ಯ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭಾನುವಾರ (ಫೆ. 23) ನಡೆಯಲಿದೆ.
ಒಂದು ಹಂತದಲ್ಲಿ ಬರೀ 35 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಬಾಂಗ್ಲಾ ದುಸ್ಥಿತಿಯಲ್ಲಿತ್ತು. 100 ರನ್ ಒಳಗೆ ಆಲೌಟ್ ಆಗುವ ಭೀತಿಯಿಂದ ಹೊರಬಂದು, ಆರನೇ ವಿಕೆಟಿಗೆ 155 ಜೊತೆಯಾಟದ ಮೂಲಕ, ಏಕದಿನ ಪಂದ್ಯಗಳಲ್ಲಿ ಸಾಧಾರಣ ಎನ್ನಬಹುದಾದ ಮೊತ್ತವನ್ನು ಬಾಂಗ್ಲಾ ಪೇರಿಸಿತ್ತು. ಸುಲಭ ಗೆಲುವಿನ ಸ್ಕೋರ್ ಅನ್ನು ಬೆನ್ನಟ್ಟಿ ಉತ್ತಮವಾಗಿ ಆರಂಭ ಕಂಡುಕೊಂಡಿದ್ದ ಭಾರತ, ಪಂದ್ಯವನ್ನೇನೋ ಗೆಲ್ಲಿತು, ಆದರೆ, ರನ್ ರೇಟ್ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿತು.