ವಿಜಯಪುರ : ರಸ್ತೆ ಬದಿ ನಿಂತಿದ್ದ ಮಹಿಳೆ ಸರಗಳ್ಳತನ ಮಾಡಿ ಹೋಗುತ್ತಿದ್ದ ಕಳ್ಳರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರ ತಾಲೂಕಿನ ಜಾಧವ ನಗರದಲ್ಲಿ ನಡೆದಿದೆ. ಜಾಧವ ನಗರದ ಅಂಗನವಾಡಿ ಕಾರ್ಯಕರ್ತೆ ಅಕ್ಕೂಬಾಯಿ ರಾಠೋಡ ಎಂಬುವವರ ತಾಳಿ ಚೈನ್ ಕದ್ದಿದ್ದ ಖದ್ದು ಪರಾರಿಯಾಗುತ್ತಿದ್ದರು.
40ಗ್ರಾಂ ತಾಳಿಚೈನ್ ಕದ್ದು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಬೆನ್ನಟ್ಟುದ್ದಾರೆ. ಈ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಬೈಕ್ ಸ್ಪೀಡ್ ಓಡಿಸುತ್ತಿದ್ದಾಗ ನಾಗಠಾಣ ಗ್ರಾಮದಲ್ಲಿ ಬೈಕ್ ಡಿಕ್ಕಿಯಾಗಿ ಇಬ್ಬರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.