ಒಂದು ಕೋಟಿ ಬೆಳೆ ತೆಗೆವ ತಾಂಬಾ ರೈತಗೆ
ಕೇಂದ್ರ ಪ್ರಶಸ್ತಿಕೇಂದ್ರದ ಬಿಲಿಯನೇರ್ ರೈತ ಪ್ರಶಸ್ತಿ ಇಂಡಿಯ ಭೀರಪ್ಪ ವಗ್ಗಿ ಪ್ರಧಾನ
ಇಂಡಿ: ಕೃಷಿಯಿಂದಲೇ ವಾರ್ಷಿಕ ಒಂದು ಕೋಟಿ ರೂ ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಇಂಡಿ ತಾಲೂಕಿನ
ತಾಂಬಾ ಗ್ರಾಮದ ಪ್ರಗತಿಪರ ಕೃಷಿಕ, ಹೈನೋಧ್ಯಮಿ, ಕಬ್ಬು, ದ್ರಾಕ್ಷಿ ಬೆಳೆಗಾರ ಸಮಗ್ರ ಕೃಷಿಯ ರೂವಾರಿ ಭೀರಪ್ಪ ವಗ್ಗಿ ಅವರಿಗೆ ಕೇಂದ್ರ ಸರಕಾರ ನೀಡುವ ಬಿಲಿಯನೇರ ರೈತ ಪ್ರಶಸ್ತಿಯನ್ನು ಕೇಂದ್ರ ಸಚಿವ ನೀತಿನ ಗಡಕರಿ ಪ್ರಧಾನ ಮಾಡಿದರು.
ನವದೆಹಲಿಯಲ್ಲಿ ಜಂತರ ಮಂತರನಲ್ಲಿ ನವ ದೆಹಲಿ
ಕೃಷಿ ಕೇಂದ್ರ ಸಚಿವಾಲಯದಿಂದ ನಡೆದ ಕಾರ್ಯಕ್ರಮದಲ್ಲಿ ಭೀರಪ್ಪ ವಗ್ಗಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಗುಜರಾಥದ ರಾಜ್ಯಪಾಲ ಆಚಾರ್ಯ ದೇವರಥ, ನವದೆಹಲಿಯ ರಾಜ್ಯಪಾಲ ವಿನಯಕುಮಾರ ಸಕ್ಷೆನಾ, ಕೇಂದ್ರ ಕೃಷಿ ಮಂತ್ರಾಲಯದ ಮುಖ್ಯಸ್ಥ
ಮನಿಷಾ ಸಕ್ಸೆನಾ ಮತ್ತು ದೆಹಲಿ ಕೃಷಿ ವಿದ್ಯಾಲಯದ
ಕುಲಪತಿ ಎ.ಕೆ.ಸಿಂಗ ಸೇರಿದಂತೆ ಅನೇಕ ಗಣ್ಯರು
ಉಪಸ್ಥಿತರಿದ್ದರು.
ಸಭೆಯಲ್ಲಿ ಭೀರಪ್ಪ ವಗ್ಗಿಯವರು ಕನ್ನಡದಲ್ಲಿ
ಮಾತನಾಡಿ ನಿಂಬೆ ಅಗಿಗಳನ್ನು ಮಾರಿ ವರ್ಷಕ್ಕೆ ಎರಡು
ಕೋಟಿ ಆದಾಯ ತರುವ ರೀತಿ ಮತ್ತು ನಿಂಬೆ ಬೆಳೆಯ ಕುರಿತು ಮಾತನಾಡಿದರು. ಅದನ್ನು ಕರ್ನಾಟಕದ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಿಂದಿಗೆ ಅನುವಾದಿಸಿದ್ದಾರೆ.
ನವದೆಹಲಿಯಲ್ಲಿ ಜಂತರ ಮಂತರನಲ್ಲಿ ನವ ದೆಹಲಿ
ಕೃಷಿ ಕೇಂದ್ರ ಸಚಿವಾಲಯದಿಂದ ನಡೆದ
ಕಾರ್ಯಕ್ರಮದಲ್ಲಿ ಭೀರಪ್ಪ ವಗ್ಗಿ ಅವರು ನೀತಿನ
ಗಡಕರಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.