ಇಂಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ
ಜನ ವಿರೋಧಿ ನೀತಗಳ ವಿರುದ್ದ ಪ್ರತಿಭಟನೆ..!
ಇಂಡಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವುದು,
ದುಡಿಯುವ ಜನರ ಶೋಷಣೆ ತಪ್ಪಿಸಬೇಕು. ಉದ್ಯೋಗ
ಸೃಷ್ಠಿಸಲು ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ
ಜನ ವಿರೋಧಿ ನೀತಗಳ ವಿರುದ್ದ ಶುಕ್ರವಾರ ಸಿಐಟಿಯು,
ಪ್ರಾಂತ ರೈತ ಸಂಘ, ಬಿಸಿ ಊಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಪಟ್ಟಣದ ಅಂಬೇಡ್ಕರ ವೃತ್ತದ ಮೂಲಕ
ನಡೆದು ಮಹಾವೀರ ವೃತ್ತ, ಬಸವೇಶ್ವರ ವೃತ್ತದ
ಮೂಲಕ ಹಾದು ಮಿನಿ ವಿಧಾನಸೌಧ ತಲುಪಿತು.
1 ಕೋಟಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು.
ಬಡವರ ಮತ್ತು ಜನ ಸಾಮಾನ್ಯ ಮೇಲೆ ತೆರಿಗೆ ಹಾಕುವ
ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ. ಹಿಂದೂ
ಮಹಿಳೆಯರ ಬಗ್ಗೆ ಮಾತನಾಡುವ ಕೇಂದ್ರ ಪ್ರಭುತ್ವ ಅಂಗನವಾಡಿ ನೌಕರರನ್ನು ಹಾಗೂ ಸಹಾಕಿಯರಿಗೆ, ಬಿಸಿ ಊಟದವರಿಗೆ, ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಸಂಬಳ ನೀಡಿ, ಹೆಚ್ಚು ದುಡಿಸಿಕೊಳ್ಳುವುದು ನ್ಯಾಯವಲ್ಲ. ಮಾತೃ ವಂದನಾ, ಪೋಷಣ್ ಅಭಿಯಾನ, ಸರ್ವೆ, ಗ್ರಹಲಕ್ಷ್ಮಿ ಮುಂತಾದ ಕೆಲಸಗಳನ್ನು ಹೆರಿ ಶೋಷಣೆ ಮಾಡುತ್ತಿದ್ದು, ಕೂಡಲೆ ಸರ್ಕಾರ ಶೋಷಣೆಯನ್ನು ನಿಲ್ಲಿಸಿ ಕನಿಷ್ಠ ವೇತನ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಿಐಟಿಯು ತಾಲೂಕು ಅಧ್ಯಕ್ಷೆ ಭಾರತಿ ವಾಲಿ, ಕಾರ್ಯದರ್ಶಿ ಗಿರೀಜಾ ಸಕ್ಕರಿ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭೀಮಾಶಂಕರ ಪೂಜಾರಿ, ಶೋಭಾ ಕುಂಬಾರ, ಎಸ್.ಆರ್. ಜೋಶಿ, ಶಾರದಾ ತಾಂಬೆ, ರೇಣುಕಾ ನಾಟೀಕಾರ, ನಾಗರತ್ನ ಗೌಂಡಿ, ಹೊನ್ನಮ್ಮ ಹಿರೇಕುರಬರ, ಸುರಮ್ಮ ಪೂಜಾರಿ, ಸಾವಿತ್ರಿ ಹಳಗುಣಕಿ, ಬೇಬಿ ಹಿರೇಮಠ, ಲಲೀತಾ ಕೋರೆ, ಸುನಂದಾ ಹೂಗಾರ, ದೀಪಾ ರೂಗಿ, ಶಂಕ್ರೆಮ್ಮ ಪುಠಾಣಿ, ರೇಖಾ ಕಬಾಡೆ, ಭಾರತಿ ಹತ್ತರಕಿ, ಪದ್ಮಾವತಿ ಬಿರಾದಾರ, ಸುಜಾತಾ ಬಿರಾದಾರ, ಪರಜಾನ ಶೇಖ, ಶೋಭಾ ಪಾಂಡ್ರೆ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ತುಕಾರಾಮ ಮಾರನೂರ, ಲಾಲಹ್ಮದ ಶೇಖ, ಬಿಸಿಊಟ ನೌಕರರ ಸಂಘದ ಕಾಳಮ್ಮ ಬಡಿಗೇರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.
ಇಂಡಿ: ಪಟ್ಟಣದಲಿ ಸಿಐಟಿಯು, ಪ್ರಾಂತ ರೈತ ಸಂಘ, ಬಿಸಿ ಊಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.