ಸಿಸಿ ರಸ್ತೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಶಾಸಕ ಮನಗೂಳಿ
ಇಂಡಿ : ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ತಾಂಬಾ ಗ್ರಾಮದ ಮತದಾರರ ಖುಣವನ್ನು ನಾನೆಂದೂ ಮರೆಯಲಾರೆ. ಮತದಾರರ ಅಭೀವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಶನಿವಾರ ತಾಂಬಾ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಅಂದಾಜು ರೂ50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಸ್ಥಳಿಯ ಮುಖಂಡರ ತಂಡದೊದಿಗೆ ಪರಿಶೀಲಿಸುವ ಮೂಲಕ ತಮ್ಮ ಅಭಿವೃದ್ಧಿಪರ ಚಟುವಟಿಕೆ ಕಾರ್ಯ ಪ್ರರಂಭಿಸಿದ್ದಾರೆ. ಕಾಮಗಾರಿ ಈಗಾಲೇ ಶೇ. 80ರಷ್ಟು ಭಾಗ ಮುಕ್ತಾಯಗೊಂಡಿದೆ ಎನ್ನುವ ಮಾಹಿತಿ ಪಡೆದ ಶಾಸಕರು ಸದ್ಯ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಪ್ರಗತಿಯಲ್ಲಿರುವ ಕಾಮಗಾರಿ ಪರಿಶಿಲನೆ ನಡೆಸಿದರು. ಯಾವ ರೀತಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿ ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ನೆರಳಾಗಿರುವೆ. ಅಭಿವೃದ್ಧಿಯಾಗದ ರಸ್ತೆಗಳು ಮೂಲ ಸೌಕರ್ಯ ಒದಗಿಸಲಾವುದು ಎಂದರು.
ಗ್ರಾಮ ಪಂಚಾಯತ್ ಸದಸ್ಯ ಪರಸು ಬೀಸನಾಳ ಮಾತನಾಡಿ ತಾಂಬಾ ಗ್ರಾಮದ ಗವಿಸಿದ್ದೇಶ್ವರ ದೇವಸ್ಥಾನಕ್ಕೆ 10.ಲಕ್ಷ, ಹನುಮಾನ ದೇವಸ್ಥಾಕ್ಕೆ 15.ಲಕ್ಷ, ಮಲ್ಲಿಕಾಜರ್ುನ ದೇವಸ್ಥಾಕ್ಕೆ 10.ಲಕ್ಷ, ಮಹಾತ್ಮ ಜೋತಿಭಾ ಫುಲೆ ಸಮುದಾಯದ ಭವನಕ್ಕೆ 10.ಲಕ್ಷ, ತಾಂಬಾ ಎಲ್.ಟಿ.ತಾಂಡಾ ಸೇವಲಾಲ ಸಮುದಾಯ ಭವನಕ್ಕೆ 20.ಲಕ್ಷ, ಜೆ.ಜಿ.ಎಂ. ಕಾಮಗಾರಿಗೆ ರೂ3 ಕೋಟಿ 71ಲಕ್ಷ, ಕಿತ್ತೂರು ರಾಣಿ ಚೆನ್ನಮ್ಮ ಕಾಲನಿಯಲ್ಲಿ ಸಿಸಿ ರಸ್ತೆಗೆ ಅಂದಾಜು ರೂ 50 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಂಪೌಂಡ ನಿರ್ಮಣಕ್ಕೆ ರೂ 20 ಲಕ್ಷ, ಗಂಗನಳ್ಳಿ ರಸ್ತೆಗೆ ರೂ 81ಲಕ್ಷ, ವಿಶ್ವಕರ್ಮ ಸಮಾಜದ ಚಿತ್ತಾಗಾರಕ್ಕೆ 5ಲಕ್ಷ, ಗ್ರಾಮದ ಬಹುದಿನಗಳ ಬೇಡಿಕೆಯಾದ ಮಹಿಳಾ ವಸತಿ ನೀಲಯ ಕಟ್ಟಡಕ್ಕೆ ರೂ 5ಕೋಟಿ ನೀಡಿದ್ದಾರೆ. ಬಡವರಿಗೆ ಸಕರ್ಾರದ ಎಲ್ಲ ಮೂಲಬೂತ ಸೌಲಭ್ಯಗಳು ಸಿಗುವಂತೆ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ರಜಾಕ ಚಿಕ್ಕಗಸಿ, ಅಪ್ಪಣ್ಣ ಕಲ್ಲೂರ, ವಿಜಯಕುಮಾರ ದೊಡ್ಡಮನಿ, ದಯಾನಂದ ನಿಂಬಾಳ, ಗೋಪಾಲ ಅವರಾದಿ, ಫತ್ತೆಸಾಬ ಉಜನಿ, ಕಿರಣ ಕಿಣಗಿ, ಜಕ್ಕಪ್ಪ ತ.ಹತ್ತಳ್ಳಿ, ಶಾಂತಪ್ಪ ಹಚನಾಳ, ವಿಶ್ವನಾಥ ಅವಟಿ, ಬಸವರಾಜ ಅವಟಿ, ಮಹ್ಮದ ದಡೇದ, ಮುನ್ನ ನಾಗಠಾಣ, ಜೈಭೀಮ ರೂಗಿ, ಅನೇಕರು ಉಸ್ಥಿತರಿದ್ದರು.
ತಾಂಬಾ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಅಂದಾಜು ರೂ50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಸ್ಥಳಿಯ ಮುಖಂಡರ ತಂಡದೊದಿಗೆ ಸಿಂದಗಿ ಶಾಸಕ ಅಶೋಕ ಮನಗೂಳಿ ಪರಿಶೀಲನೆ ಮಾಡುತ್ತಿರುವುದು.