ವಿಜಯಪುರ : ಸಚಿವ ವಿ.ಸೋಮಣ್ಣ ನನಗೆ ಅತ್ಯಂತ ಆತ್ಮೀಯರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರೋದಿಲ್ಲ ಎಂದು ಸಚಿವ ಸಿಸಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾನು ಅವರೊಂದಿಗೆ ಮಾತಾಡಿದ್ದೇನೆ. ಸೋಮಣ್ಣ ಒಬ್ಬ ಮುತ್ಸದ್ದಿ ರಾಜಕಾರಣಿ ಆಗಿದ್ದಾರೆ. ಬೆಂಗಳೂರಿನಲ್ಲಿ ಸತತವಾಗಿ ಆರಿಸಿ ಬರುವುದು ಅಷ್ಟು ಸರಳ ಮಾತಲ್ಲ. ಸ್ನೇಹ ಹಾಗೂ ಹೊಂದಾಣಿಕೆ ಬೇರೆ ಬೇರೆ ಎಂದರು. ಇನ್ನೂ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ ಎಂಬ ಸುದ್ದಿ ಇದೆ. ನನಗೆ ನಿಖರವಾಗಿ ಗೊತ್ತಿಲ್ಲ ಎಂದರು.