ಅಫಜಲಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಕಲಿಕಾ ಕೇಂದ್ರವಾಗಬೇಕಿದ್ದ ವಸತಿ ನಿಲಯ ಇದೀಗ ಹಾಳು ಕೊಂಪೆಯಾಗಿದೆ. ಗಡಿ ಭಾಗದ ಕೊನೆಯ ಗ್ರಾಮವೆಂಬ ಕಾರಣಕ್ಕೆ ಆ ಗ್ರಾಮದ ವಸತಿ ನಿಲಯ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ವಿದ್ಯಾರ್ಥಿಗಳ ಪಾಲಕರು ಹಾಗೂ ಸಂಘಟನೆಗಳ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೌದು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊನೆಯ ಹಳ್ಳಿಯಾದ ಹೊಸುರು ಗ್ರಾಮ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಗ್ರಾಮ. ಗಡಿ ಭಾಗದ ಗ್ರಾಮವಾದ ಹೊಸೂರು ಬಹಳಷ್ಟು ಜನಸಂಖ್ಯೆ ಹೊಂದಿರುವ ಗ್ರಾಮ ಇದಾಗಿದೆ. ಈ ಗ್ರಾಮ ಶಿಕ್ಷಣಕ್ಕೆ ಹೆಸರು ಮಾಡಿದ ಊರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಸುಮಾರು 50 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ದಿನ ನಿತ್ಯ ವಿದ್ಯಾರ್ಥಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಇಲ್ಲಿನ ವಸತಿ ನಿಲಯದ ಸಮಸ್ಯೆಗಳ ಕುರಿತು
ಹೊಸುರ ಗ್ರಾಮದ ಕರವೇ ಅಧ್ಯಕ್ಷರಾದ ಲಕ್ಷ್ಮೀಕಾಂತ ಚಿನಮಳ್ಳಿ ಅವರು ಮಾತನಾಡಿ ಈ ಗ್ರಾಮದ ವಸತಿ ನಿಲಯದಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಈ ವಸತಿ ನಿಲಯದಲ್ಲಿ ಬೇರೆ ಬೇರೆ ತಾಲೂಕಿನಿಂದ ಮಕ್ಕಳು ಬಂದು ವಿದ್ಯಾಭ್ಯಾಸ ಮಾಡುತ್ತಾರೆ. ಆದ್ರೆ ಈ ವಸತಿ ನಿಲಯದಲ್ಲಿ ಸರಿಯಾಗಿ ಮಲಗಲು ಆಸನದ ವೆವಸ್ಥೆ ಇಲ್ಲ. ಸರಿಯಾದ ವಿದ್ಯುತ್ ಬೋರ್ಡಗಳಿಲ್ಲ. ಕಿಡಕಿಗಳಿಗೆ ಯಾವದಕ್ಕೂ ಮುಚ್ಚುವ ವೆವಸ್ಥೆ ಇಲ್ಲ. ಮಕ್ಕಳು ಈ ವಿಷಯ ಕುರಿತು ಎಷ್ಟೋ ಬಾರಿ ಮೇಲ್ವಿಚಾರಕರ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಆಗಿಲ್ಲ.
ಇಲ್ಲಿ ಶಿಕ್ಷಣ ಸರಿಯಾಗಿ ಇದೆ ಎಂದು ದೂರದ ಊರುಗಳಿಂದ ಪಾಲಕರು ತಂದು ತಮ್ಮ ಮಕ್ಕಳನ್ನು ಬಿಡುತ್ತಾರೆ. ಆದ್ರೆ ವಸತಿ ನಿಲಯದಲ್ಲಿ ಸರಿಯಾದ ಓದುವ ವಾತಾವರಣ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಇಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಸತಿ ನಿಲಯಕ್ಕೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವದು ಎಚ್ವರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತಾರವಣ ನಿರ್ಮಿಸಿತ್ತಾರೋ ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಾರೋ ಕಾದು ನೋಡಬೇಕಿದೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.