ಜಾತಿ ಧರ್ಮ ಬಿಡಿ ಅದರಿಂದ ಏನು ಸಾಧಿಸಲು ಸಾಧ್ಯವಿಲ್ಲ:ಮಾಜಿ ಶಾಸಕ ನಡಹಳ್ಳಿ
ಜಾತಿಯಿಂದ ಹೊರಬಂದು ಎಲ್ಲರೂ ಒಂದಾಗಿ ನಾಡು ದೇಶವನ್ನು ಕಟ್ಟೋಣವೆಂದು ಕರೆ.
ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರ
56 ನೇ ಹುಟ್ಟು ಹಬ್ಬವನ್ನು ನಡಹಳ್ಳಿ ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಆಚರಣೆ
ಮುದ್ದೇಬಿಹಾಳ ; ಜಾತಿ_ಜಾತಿ ಎನ್ನುವುದನ್ನು ಕೈ ಬಿಡಬೇಕು ದೇಶ ಹಾಳಾಗಲು ಪ್ರಮುಖ ಕಾರಣ ಜಾತಿ ಜಾತಿ ಎನ್ನುವುದಾಗಿದೆ ಜಾತಿಯಿಂದ ಹೊರಬಂದು ಎಲ್ಲರೂ ಒಂದಾಗಿ ನಾಡು ದೇಶವನ್ನು ಕಟ್ಟೋಣವೆಂದು ಬಿಜೆಪಿ ರೈತ ಮೋರ್ಚಾದ ರಾಜ್ಯಧ್ಯಕ್ಷ್ಯ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಮಂಗಳವಾರ ತಮ್ಮ ತೋಟದ ಮನೆಯಲ್ಲಿ ನಡಹಳ್ಳಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಅವರ56 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು ನಿಮಗೆ ಕೈ ಮುಗಿಯುತ್ತೇನೆ ಜಾತಿ ಧರ್ಮ ಬಿಡಿ ಅದರಿಂದ ಏನು ಸಾಧಿಸಲು ಸಾಧ್ಯವಿಲ್ಲ ನಮ್ಮ ರೈತರ ಭೂಮಿ ಗೆ ನೀರು ಬರಬೇಕು ನೀರಾವರಿ ಆಗಬೇಕು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಬೇಕು ಎಂದರು
224 ಮತಕ್ಷೇತ್ರದಲ್ಲಿ ನಮ್ಮ ತಾಲೂಕಿನಲ್ಲಿರುವಷ್ಟು ಸಂಪನ್ಮೂಲ ಇಲ್ಲ ಇಲ್ಲಿ ಎರಡು ಆಣೆಕಟ್ಟು 68 ಕರೆಗಳು ಫಲವತ್ತಾದ ಭೂಮಿ 12 ತಿಂಗಳು ನೀರು ಇದೆ ಆದರೆ ಇದನ್ನು ಗುರುತಿಸಿ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ನಾಯಕನನ್ನು ಆಯ್ಕೆ ಮಾಡಲಿಲ್ಲ ಮತಹಾಕಿ ಗೆಲ್ಲಿಸಿದ ಮತದಾರಿಗೆ ಕೃತಜ್ಞತೆ ಹೇಳದ ನಾಯಕನನ್ನು ಆರಿಸಿದ್ದಿರ, ರೈತರಿಗೆ ಫಸಲಭೀಮಾ ಯೋಜನೆ ಇಲ್ಲ, ಬೂದಿಹಾಳ ಪೀರಾಪೂರ ಏತನೀರಾವರಿ ಸಮರ್ಪಕ ಬಳಕೆ ಇಲ್ಲಾ ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿವೆ ನಮ್ಮ ಮತಕ್ಷೇತ್ರದ ಜನರು ದಡ್ಡರೂ ಮುಗ್ದರೂ ತಿಳಿಯುತಿಲ್ಲ
ನಾನು ರಾಜಕೀಯಕ್ಕೆ ಬರದೆ ಬ್ಯುಸಿನೆಸ್ ನಲ್ಲಿ ಮುಂದುವರೆದಿದ್ರೆ ೨ ಸಾವಿರ ಕೋಟಿ ಎಂಪೈರ್ ಕಟ್ಟುತ್ತಿದ್ದೆ ನನ್ನ ದುಡಿಮೆ ಅರ್ದ ಹಣ ದಾನಕ್ಕೆ ವ್ಯಯಿಸಿದ್ದೇನೆ ಅಭಿವೃದ್ಧಿ ಮಾಡುವವನ್ನು ಸೋಲಿಸಿ 25 ವರ್ಷ ನಿದ್ರೆ ಮಾಡುವ, ಸುಳ್ಳು ಹೇಳುವರನ್ನು ಆರಿಸಿ ತರುತ್ತಾರೆಂದು ವಿಷಾದ ವ್ಯಕ್ತಪಡಿಸಿದರು
ನಾಡಗೌಡರಿಗೆ ನಡಹಳ್ಳಿ ಸವಾಲ್ ; ತಾಲೂಕಿನಲ್ಲಿ 7 ತಾಸು ವಿದ್ಯುತ್ ಸಿಗುತ್ತದೆ ತಾಲೂಕಿನ ಒಂದು ಪಂಚಾಯತಿಯಲ್ಲಿ 12 ತಾಸು ವಿದ್ಯುತ್ ಕೂಡಿಸುವ ಸವಾಲ್ ಶಾಸಕ ನಾಡಗೌಡರಿಗೆ ಹಾಕ್ತನೆ ನಾನು ೧೨ ತಾಸು ವಿದ್ಯುತ್ ಕೂಡಿಸಬಲ್ಲೆ ಅವರಲ್ಲಿ ಇಚ್ಛಾಶಕ್ತಿ ಇಲ್ಲಾ ಆದರ್ಶದ ಭಾಷಣ ಮಾಡುವ ನಾಡಗೌಡರು ನನ್ನ ಫ್ಯಾಕ್ಟರಿ ಪರಮಿಶನ್ ಪಂಚಾಯತಿಯಿಂದ ಪಡೆಬೇಕೆಂತೆ
ಎ.ಎಸ್ ಪಾಟೀಲ್ ನಡಹಳ್ಳಿ
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಎಂ.ಎಸ್.ಪಾಟೀಲ ನಾಲತವಾಡ, ಮುತ್ತುಸಾಹುಕಾರ ಅಂಗಡಿ, ಮನೋಜ್ ಶೆಟ್ಟಿ ಜಿಪಂ ಮಾಜಿ ಅಧ್ಯಕ್ಷ ಗಂಗಾಧರರಾವ್ ನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಬಿ.ಪಿ.ಕುಲಕರ್ಣಿ, ಪ್ರಭು ಕಡಿ ರವಿಕಾಂತ ಬಗಲಿ, ಪ್ರಭುಗೌಡ ಬಿರಾದಾರ, ರಮೇಶ ಬಿದ್ದೂರ, ಸುಮಂಗಲಾ ಕೋಟಿ, ಕೆ.ವೈ. ಬಿರಾದಾರ, ಸಾನ್ನಿಧ್ಯ ವಹಿಸಿದ್ದ ಶರಣಸೋಮನಾಳದ ಮಹಾದೇವಯ್ಯ ಶಾಸ್ತ್ರಿ ಮಾತನಾಡಿ ಅಭಿವೃದ್ಧಿ ಹರಿಕಾರ ನಡಹಳ್ಳಿ ಅವರನ್ನು ಸೋಲಿಸಿದ್ದು ಅವರ ಸೋಲಲ್ಲ ಅದು ಮತಕ್ಷೇತ್ರದ ಜನರ ಸೋಲು ಎಂದರು.
ಕಾರ್ಯಕರ್ತರೂಂದಿಗೆ ಹುಟ್ಟು ಹಬ್ಬ; ಜುಲೈ22 ನಡಹಳ್ಳಿ ಅವರ ಹುಟ್ಟು ಹಬ್ಬ ಇದೆ ದಿನಾಂಕದಲ್ಲಿ ಹುಟ್ಟಿದ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಅಶೋಕ ರಾಠೋಡ, ಚಂದ್ರಶೇಖರ ಗಂಗನಗೌಡರ, ಸಹನಾ ಬಡಿಗೇರ, ಸಿದ್ದು ಹಿರೇಮಠ ಅವರೂಂದಿಗೆ ವೇದಿಕೆ ಹಂಚಿಕೊಂಡು ಕೇಕ್ ಕತ್ತರಿಸುವ ಮೂಲಕ ನಡಹಳ್ಳಿ ತಮ್ಮ56 ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
ಎಂದರು.
ಇದೇ ವೇಳೆ ಅಪಾರ ಅಭಿಮಾನಿಗಳು ನಡಹಳ್ಳಿ ಅವರನ್ನು ಸನ್ಮಾನಿಸಿ ಜನ್ಮದಿನದ ಶುಭ
ಕೋರಿದರು. ನಡಹಳ್ಳಿಯವರು ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೆ ವೇದಿಕೆ ಹಂಚಿಕೊಂಡು ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು. ಇದಕ್ಕೂ ಮುನ್ನ ಜನ್ಮದಿನ ನಿಮಿತ್ತ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕರಾದ ಡಾ। ರೇವಣಸಿದ್ದ ಮಸೂತಿ, ಡಾ|ಚಂದ್ರಶೇಖರ ಶಿವಯೋಗಿಮಠ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೂರಾರು ಜನರು ಶಿಬಿರಗಳ ಪ್ರಯೋಜನ ಪಡೆದುಕೊಂಡರು.
ಇದೇ ವೇಳೆ ಅಪಾರ ಅಭಿಮಾನಿಗಳು ನಡಹಳ್ಳಿ ಅವರನ್ನು ಸನ್ಮಾನಿಸಿ ಜನ್ಮದಿನದ ಶುಭ
ಕೋರಿದರು.
ನಡಹಳ್ಳಿಯವರು ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೆ ವೇದಿಕೆ ಹಂಚಿಕೊಂಡು ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು.
ಇದಕ್ಕೂ ಮುನ್ನ ಜನ್ಮದಿನ ನಿಮಿತ್ತ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕರಾದ ಡಾ ರೇವಣಸಿದ್ದ ಮಸೂತಿ, ಡಾ ಚಂದ್ರಶೇಖರ ಶಿವಯೋಗಿಮಠ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೂರಾರು ಜನರು ಶಿಬಿರಗಳ ಪ್ರಯೋಜನ ಪಡೆದುಕೊಂಡರು.
ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ,ಬಿಜೆಪಿ ಅಧ್ಯಕ್ಷ ಜಂಗದೇಶ ಪಂಪಣ್ಣವರು,ಸಂಜು ಬಾಗೇವಾಡಿ, ಗೀರಿಶಗೌಡ ಪಾಟೀಲ, ನಾಗೇಶ ಕವಡಿಮಟ್ಟಿ, ಎಸ್ ಎಸ್ ಶಿವಣಗಿ ಕಂದಗನೂರ, ಅನಿಲ ರಾಠೋಡ,ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಸ್ವಾಗತಿಸಿ ದರು. ಡಾ ವೀರೇಶ ಪಾಟೀಲ ಪ್ರಾಸ್ತಾವಿಕ ಮಾತ ನಾಡಿದರು. ಸಿದ್ದರಾಜ ಹೊಳಿ ನಿರ್ವಹಿಸಿದರು. ಸಂಗಮೇಶ ಶಿವಣಗಿ,ಚಂದ್ರಶೇಖರ ಪತ್ತಾರ ಪ್ರಾರ್ಥಿಸಿ ಸಂಗೀತ
ಸೇವೆ ನೀಡಿದರು.
ಸಚಿವ ಕೃಷ್ಣಾಬೈರೆಗೌಡರು ಕೃಷ್ಣ ಮೇಲ್ದಂಡೆ ಭೂಸ್ವಾಧಿನದಲ್ಲಿ 1 ಲಕ್ಷ ಕೋಟಿ ನಷ್ಟವಾಗುತ್ತದೆ ಎನ್ನುತ್ತಾರೆ ರೈತರ ಭೂಮಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ರೈತರ ಭೂಮಿ ಪುನಃ ಸೃಷ್ಟಿಸಲು ಸಾಧ್ಯವಿಲ್ಲ ಇದನ್ನು ಅರಿಯದ ಜನರಿಗೆ ಜನ ಓಟುಹಾಕಿ ಜೈ ಎನ್ನುತ್ತಾರೆ; ಎ ಎಸ್ ಪಾಟೀಲ
(ನಡಹಳ್ಳಿ) ಮಾಜಿ ಶಾಸಕರು.