ನಾಳೆ ಜೂನ್ 16 ರಂದು ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ಬಿ.ಬಿ.ಆರ್ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಟೊಯೋಟಾ ಕಂಪನಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ ೧೬, ಸೋಮವಾರದಂದು ಮೆ
ಮೈಹಿಬೂಬನಗರದ ನಾಲತವಾಡ ರಸ್ತೆಯ, ಪುರಸಭೆ ಸ್ವಾಗತ ಕಮಾನ ಬಳಿ ಬರುವ ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜ ಆವರಣದಲ್ಲಿ ಆಸಕ್ತ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಅಭ್ಯರ್ಥಿಗಳಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೯-೩೦ ಗಂಟೆಗೆ ಬಿ.ಬಿ.ಆರ್ ಹಾರ್ವರ್ಡ್ ಕಾಲೇಜಿನಲ್ಲಿ ಬೆಂಗಳೂರಿನ ಟೊಯೊಟಾ ಮಶಿನರಿ ಪ್ರೈವೆಟ್ ಲಿಮಿಟೆಡ್ನ ನವರು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಪಾಸಾದ ಮತ್ತು ಐಟಿಐ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ತಮ್ಮ ಓರಿಜನಲ್ ಸರ್ಟಿಫಿಕೇಟ್‌ಗಳೊಂದಿಗೆ ಮತ್ತು ಅವುಗಳ ೧ ಜೊತೆ ಜೆರಾಕ್ಷ್ ಪ್ರತಿ ಹಾಗೂ ಇತ್ತೀಚಿನ ೨ಫೋಟೋ ತೆಗೆದುಕೊಂಡು ಈ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆಯೆಂದು ಐಟಿಐ ಪ್ರಾಚಾರ್ಯರಾದ ಎಸ್. ಎಂ. ನೆರಬೆಂಚಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೋ. ನಂ. ೯೪೪೯೬೧೨೪೩೧, ೮೯೫೧೧೬೬೧೦೦ ಗಳಿಗೆ ಸಂಪರ್ಕಿಸಬಹುದಾಗಿದೆ. ಅವರು ತಿಳಿಸಿದ್ದಾರೆ.