ವಿಕಲಚೇತನರಿಗೆ ಒಟ್ಟು ೩೪ ತ್ರಿಚಕ್ರ ವಾಹನಗಳಗಳನ್ನು ವಿತರಣೆ: ಶಾಸಕ ಸಿ.ಎಸ್.ನಾಡಗೌಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಪಂ ಅನುದಾನ ಒಟ್ಟು 5 ತ್ರಿಚಕ್ರ ಬೈಕ್, ಶಾಸಕರ ಅನುದಾನ ಅಡಿಯಲ್ಲಿ 29 ತ್ರಿಚಕ್ರ ಬೈಕ್ ಒಟ್ಟು 34 ವಾಹನಗಳನ್ನು ಫಲಾನುಭವಿಗಳಿಗೆ ವಾಹನಗಳನ್ನು ನೀಡುತ್ತಿದ್ದೇವೆ.
ವಿಕಲಚೇತನರು ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಹಶಿಲ್ದಾರ ಕಚೇರಿ ಆವರಣದಲ್ಲಿ ಮುಂದೆ,ತಾಪಂ ಅನುದಾನ, ಶಾಸಕರ ಅನುದಾನದಲ್ಲಿ ವಿಕಲಚೇತನರಿಗೆ ಒಟ್ಟು 35 ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದ
ಅವಗಳನ್ನು ಸರಿಯಾಗಿ ಸರ್ವಿಸ್ ಮಾಡಿಸಿಕೊಳ್ಳಿ ಏಕೆಂದರೆ ಒಮ್ಮೆ ನೀಡಿದವರಿಗೆ ಮತ್ತೊಮ್ಮೆ ನೀಡುವುದಿಲ್ಲ. ಈ ತ್ರಿಚಕ್ರ ಬೈಕ್ ವಾಹನ ಮೇಲೆ ಮೂರುನಾಲ್ಕು ಜನರು ಕುಡಿಸಿ ವಾಹನ ಚಾಲನೆ ಮಾಡಬಾರದು ಕಿವಿ ಮಾತು ನೀಡಿದರು. ಬೈಕ್ ಗಾಲಿ ತೆಗೆದು ಹೊಡೆಯುವುದು, ದುರುಪಯೋಗ ಮಾಡಿಕೊಳ್ಳಬೇಡಿ. ಸರ್ಕಾರ ನಿಮಗೆ ಯಾವ ಉದ್ದೇಶಕ್ಕಾಗಿ ನೀಡಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಲು ಶಾಸಕರು ವಿಕಲಚೇತನರಿಗೆ ಕರೆ ನೀಡಿದರು.
ಈ ವೇಳೆ ಪ್ರಾಸ್ತಾವಿಕವಾಗಿ ಎಸ್ ಕೆ ಘಾಟಿಗೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಕೀರ್ತಿ ಚಾಲಕ,ತಾ.ಪಂ ಇಓ ವೆಂಕಟೇಶ ವಂದಾಲ,ಅಬಕಾರಿ ಇಲಾಖೆ ನಿರೀಕ್ಷಕಿ ಜ್ಯೋತಿ ಮೇತ್ರಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ,ಬಿಇಒ ಬಿ.ಎಸ್.ಸಾವಳಗಿ,ಸಿಡಿಪಿಓ ಶಿವಮೂರ್ತಿ ಕುಂಬಾರ, ಡಾ ಸತೀಶ್ ತಿವಾರಿ, ಪಶುಸಂಗೋಪನೆ ಇಲಾಖೆ ಅಧಿಕಾರಿ ಶಿವಾನಂದ ಮೇಟಿ,ಪಿಎಸ್‌ಐ ಆರ್.ಎಲ್. ಮನ್ನಾಬಾಯಿ,ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ಶಂಕರಗೌಡ ಹಿರೇಗೌಡರ, ಅಪ್ಪುಧಣಿ ಕೇಸಾಪುರ.ವಾಯ್ ಹೆಚ್ ವಿಜಯಕರ, ಶಿವು ಶಿವಪುರ.ರಾಮಣ್ಣ ರಾಜನಾಳ,ತಿಪಣ್ಣ ದೊಡಮನಿ, ವಿವಿಧ ಇಲಾಖೆ ಅಧಿಕಾರಿಗಳು ,ವಿಕಲಚೇತನರು, ಸೇರಿದಂತೆ ಉಪಸ್ಥಿತರಿದ್ದರು.