ಕಳಪೆ ಆಹಾರ ಪೂರೈಕೆ ಹಾಗೂ ಭ್ರಷ್ಟಾಚಾರ ಎಸಿಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕರವೇ ಆಗ್ರಹ..!
ಇಂಡಿ : ತಾಲ್ಲೂಕಿನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳ ಮೇಲೆ ತೀವ್ರ ತರಹನಾದ ದುಷ್ಪರಿಣಾಮ ಬೀರುತ್ತಿದ್ದು, ಮೇಲಿಂದ ಮೇಲೆ ಚಿಕ್ಕ ಮಕ್ಕಳು ಅನಾರೋಗ್ಯದಿಂದ ಬಳಲುವಂತಾಗಿದೆ. ಈ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮತ್ತು ಹಾಲಿನ ಪುಡಿ, ಮೊಟ್ಟೆ ಮಾರಾಟದಲ್ಲಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಅವರು ಮನವಿ ಸಲ್ಲಿಸಿದ್ದಾರೆ.
ಹೌದು, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ತಾಲೂಕಿನ ಹಿನ್ನೆಲೆಯಲ್ಲಿ, ಸರಕಾರದ ಆದೇಶವನ್ನು ಉಲ್ಲಂಘಿಸಿ ತಮ್ಮ ಮನಸೋ ಇಚ್ಚೇ ಅಧಿಕಾರ ದುರುಪಯೋಗ ಪಡಿಸಿಕೊಂಡು
ಎಲ್ಲ ಅಂಗನವಾಡಿ ಕೇಂದ್ರಗಳಿಗೆ MSPTC ಯಿಂದ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಾ ಅಂಶವಿಲ್ಲದಂತೆ ಭ್ರಷ್ಟಾಚಾರವೆಸಗುತ್ತಿದ್ದಾರೆ. ಆ ಕಾರಣದಿಂದ ತುರ್ತಾಗಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಸರಕಾರಕ್ಕೆ ಆದ ನಷ್ಟವನ್ನು ಅವರಿಂದ ಭರಿಸಬೇಕು ಎಂದು ಕರವೇ ಈ ಮೂಲಕ ಅಗ್ರಹಪಡಿಸುತ್ತದೆ. ಅಧಿಕಾರಿಗಳ ಭ್ರಷ್ಟಾಚಾರದ ಸ್ವರೂಪ ಈ ಕೆಳಗಿನಂತಿವೆ.
• ಅಧಿಕಾರಿಗಳು ತಾವೇ ಬೇನಾಮಿ ಹೆಸರಿನಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಾ ಅಧಿಕಾರ ದುರುಪಯೋಗಪಡಿಸಿಕೋಳ್ಳುತ್ತಿದ್ದಾರೆ.
• MSPTC ಅಧಿಕಾರಿಗಳ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಳಪೆ ಮಟ್ಟದ ಆಹಾರ ಮತ್ತು ಕಡಿಮೆ ಪ್ರಮಾಣದಲ್ಲಿ ಪೂರೈಸುತ್ತಿದ್ದಾರೆ.
• ಅಂಗನವಾಡಿ ಕೇಂದ್ರಗಳಿಗೆ ಆಹಾರ ಮತ್ತು ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ದೃಢೀಕರಿಸಿ
ತಾವು ಹೇಳಿದ ಹಾಗೇ ಮಾಡದಿದ್ದರೆ ಕೆಲಸದಿಂದ ವಜಾಗೊಳಿಸುವುದಾಗಿ ಹೆದಲಿಸುತ್ತಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
• ಹಾಲಿನ ಪುಡಿ ಕಳ್ಳ ಮಾರಾಟದಲ್ಲಿ ಸಿಕ್ಕಿ ಬಿದ್ದ ಅಧಿಕಾರಿಯೇ ಇಂಡಿ ತಾಲೂಕಿಗೆ ನಿಯೋಜನೆಗೊಂಡಿದ್ದು, ಭಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಹಾಗೂ ತಾಲೂಕಿಗೆ ದುರಂತದ ಸಂಗತಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
. ಇತ್ತೀಚೆಗೆ ನಡೆದ ಮೊಟ್ಟೆ ಪೂರೈಕೆಯಲ್ಲಿ ಆದ ಬ್ರಹ್ಮಾಂಡ ಭ್ರಷ್ಟಾಚಾರವು ಎಲ್ಲ ಮಾಧ್ಯಮದಲ್ಲಿ ಬಂದರೂ ಕ್ಯಾರೇ ಅನ್ನದೇ ಅಧಿಕಾರಿಗಳು ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಇಂಬು ನೀಡುವಂತೆ ಮೇಲಾಧಿಕಾರಿಗಳು ಸಹ ಯಾವುದೇ ಕ್ರಮ ಕೈಗೊಳ್ಳದೇ ಚಾಣ ಮೌನಕ್ಕೆ ಶರಣಾಗಿದ್ದಾರೆ.
• ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸದೇ ದುಪ್ಪಟ್ಟು ಬಿಲ್ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
• ಸರಕಾರ BIS COMPANY ಗೆ ಆಹಾರ ಪೂರೈಸಲು ಆದೇಶ ನೀಡಿದ್ದರೂ ಸಹ ಆದೇಶ ಉಲ್ಲಂಘನೆ ಮಾಡಿ ಅಧಿಕಾರಿಗಳು ತಾವೇ ಸ್ವತಃ ಬೇನಾಮಿ ಹೆಸರಿನಲ್ಲಿ ಆಹಾರ ಪೂರೈಕೆ ಮಾಡುತ್ತಾ ಅಕ್ರಮವೆಸಗುತ್ತಿದ್ದಾರೆ.
• ಅಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಂಜೀವಿನಿ ಮಹಿಳಾ ವಿಕಾಸ ಸಂಘ ಕಲಬುರ್ಗಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಈ ಸಂಘಕ್ಕೆ ಸರಕಾರದಿಂದ ಆಹಾರ ಪೂರೈಕೆ ಮಾಡಲು ಯಾವುದೇ ಆದೇಶವಿಲ್ಲದಿದ್ದರೂ ಸಹ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇದು ನಕಲಿ ಸಂಘವಿದ್ದು ಅಧಿಕಾರಿಗಳು ಶಾಮೀಲಾಗಿ ಭಷ್ಟಾಚಾರವೆಸಗುತ್ತಿದ್ದಾರೆ.
ಕೂಡಲೇ ಭ್ರಷ್ಟಾಚಾರವೆಸಗುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರವೇ ಒತ್ತಾಯ ಪಡಿಸುತ್ತದೆ. ಕ್ರಮ ಜರುಗಿಸದೇ ಇದ್ದರೇ ಜಿಲ್ಲಾ ಪಂಚಾಯತ ಮುಖ್ಯ ಕಛೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.