ಇಂಡಿ : ಬುಲೆರೋ ವಾಹನದಲ್ಲಿ ಕರುಗಳ ಸಾಗಾಟ ವೇಳೆ ವಾಹನ ಅಪಘಾತವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಬಳಿ ನಡೆದಿದೆ. ವಾಹನದಲ್ಲಿದ್ದ 60ಕ್ಕು ಅಧಿಕ ಕರುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕರುಗಳ ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಬಿಗಿದು ಕರುಗಳನ್ನ ಹೇರಿಕೊಂಡು ಖದೀಮರು ಹೋಗುತ್ತಿದ್ದರು. ಮಹಾರಾಷ್ಟ್ರದ ಸಾತಾರಾ ಕಡೆಯಿಂದ ವಿಜಯಪುರಕ್ಕೆ ವಾಹನ ಬರುತ್ತಿದ್ದ ವೇಳೆ ಅಪಘಾತ ಆಗಿದೆ.
ವಾಹನದಲ್ಲಿ ಮಾರಕಾಸ್ತ್ರಗಳುಕರು ಸಹ ಪತ್ತೆಯಾಗಿವೆ. ಸ್ಥಳೀಯರ ಕೈಗೆ ಸಿಕ್ಕಿಬಿಳುವ ಆತಂಕದಿಂದ ವಾಹನ ಸ್ಥಳದಲ್ಲಿ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.