ಇಂಡಿ: ನೋಬೆಲ್ ಪಾರಿತೋಷಕ ಪಡೆದ ಭಾರತೀಯ ವಿಜ್ಞಾನಿ ಸಿ.ವ್ಹಿ. ರಾಮನ್ ಹುಟ್ಟುಹಬ್ಬವನ್ನು “ಮಕ್ಕಳ ನಡೆ ವಿಜ್ಞಾನಿ ಕಡೆ” ಎಂಬ ಮಂತ್ರ ಘೋಷದೊಂದಿಗೆ ಪಟ್ಟಣದ ಸಿ.ವಿ. ರಾಮನ್ ಪಿಯು ಕಾಲೇಜಿನಲ್ಲಿ ಮಂಗಳವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾನಂದ
ಕಾಮಗೊಂಡ ಮಾತನಾಡಿ, ಬೆಳಕಿನ ವಕ್ರೀಭವನ
ಎನ್ನುವ ವಿಷಯಕ್ಕೆ ಪಾರಿತೋಷಕ ಪಡೆದ ಭಾರತೀಯ
ಮೊದಲ ವಿಜ್ಞಾನಿ ಸಿ.ವಿ. ರಾಮನ್ ಅವರಾಗಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ಸಿ.ವಿ. ರಾಮನ್ ಅವರ ಹಾದಿಯಲ್ಲಿ
ಸಾಗಬೇಕು ಎಂದು ತಿಳಿಹೇಳಿದರು.
ವಿದ್ಯಾರ್ಥಿಯಾದ ಶಾಂತಕುಮಾರ್ ಖಾನಾಪುರ್, ಅಭಿಷೇಕ್ ಬೀಳಗಿ, ಅರಮಾನ ಮಕಾನದಾರ ಅವರು ವಿಜ್ಞಾನ ವಿಷಯದ ಪ್ರಬಂಧಗಳನ್ನು ಮಂಡಿಸಿದರು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಮಹಾವೀರ್
ವರ್ಧಮಾನ್, ಶೈಲೇಶ್ ಬೀಳಗಿ, ಸನ್ಮತಿ ಹಿಳ್ಳಿ, ಪ್ರಸನ್ನ
ಕುಮಾರ್ ನಾಡಗೌಡ, ಶ್ರೀಮತಿ ಶೈಲಜಾ ಜಹಾಗೀರದಾರ
ಉಪಸ್ಥಿತರಿದ್ದರು.