ಬುಯ್ಯಾರ ಕೆರೆ ತುಂಬುವ ಯೋಜನೆಯ ವೈಶಿಷ್ಟ್ಯ ವೇನು ? ಶಾಸಕ ಯಶವಂತರಾಗೌಡ ಪಾಟೀಲ..!
ಇಂಡಿ : ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ, ಸುಮಾರು ವರ್ಷಗಳಿಂದ ನೀರಿನ ಜ್ವಲಂತ ಸಮಸ್ಯ ಅನುಭವಿಸುತ್ತಿರುವ,
ಬರದನಾಡು ಎಂದು ಪ್ರಖ್ಯಾತ ಪಡೆದಿರುವ ಇಂಡಿ ತಾಲ್ಲೂಕಿನ ಬುಯ್ಯಾರ ಕೆರೆ ತುಂಬುವ ಯೋಜನೆಯ ವೈಶಿಷ್ಟ್ಯತೆ ಕುರಿತು ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ದ್ವನಿ ಮೊಳಗಿಸಿದ ಶಾಸಕ ಯಶವಂತರಾಯಗೌಡ ಪಾಟೀಲ.
ಬುಯ್ಯಾರ ಕೆರೆ ತುಂಬುವ ಯೋಜನೆಯಿಂದ ಯಾವೆಲ್ಲಾ ಕೆರೆ ತುಂಬಬಹುದಾಗಿರುತ್ತೆದೆ ? ಈ ಯೋಜನೆ ಪ್ರಾರಂಭ ವಾಗಿದ್ದು ಯಾವಾಗ ? ಬಳಸಿದ ಅನುದಾನ ಎಷ್ಟು ? ಈ ಯೋಜನೆಯಿಂದ ಸಮರ್ಪಕವಾಗಿ ನೀರು ಪೂರೈಕೆವಾಗಿದಿಯೇ ? ತ್ರಾಂತ್ರಿಕ ತೊಂದರೆ ಇದ್ದರೆ ತೆಗೆದುಕೊಂಡು ಕ್ರಮಗಳೇನು ? ಎನ್ನುವ ಮೂಲಕ ಕೆರೆ ತುಂಬುವ ಯೋಜನೆಯ ಮೇಲೆ ಬೆಳಕು ಚಲ್ಲಿದ್ದಾರೆ.
ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವರು ಗೋವಿಂದ ಕಾರಜೋಳ ಅವರು, ಬುಯ್ಯಾರ ಕೆರೆ ತುಂಬುವ ಯೋಜನೆಯಡಿ ಭೀಮಾನದಿ ಪಾತ್ರದಿಂದ ನೀರಿನ ಲಭ್ಯತೆಯನ್ನಾಧರಿಸಿ ವಾರ್ಷಿಕ ೨೪೩ ದಿನಗಳ ಪಂಪಿಂಗ್ ಮಾಡಿ ತಾಲ್ಲೂಕಿನ ೮ ಕೆರೆಗಳು ಇಂಡಿ -೧, ಇಂಡಿ -೨, ಹಂಜಗಿ, ಬಬಲಾದ, ತಡವಲಗಾ, ನಿಂಬಾಳ, ರಾಜನಾಳ, ಕೊಟ್ನಾಳ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆ ಅಗಸ್ಟ್ ೨೦೧೬ ರಲ್ಲಿ ಪ್ರಾರಂಭಗೊಂಡು ಫ್ರೆಬ್ರವರಿ ೨೦೧೮ ರಲ್ಲಿ ಪೂರ್ಣಗೊಂಡಿದೆ. ಒಟ್ಟು ೫೯೫೪.೨೫ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ಬುಯ್ಯಾರ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ನದಿಯ ಪಾತ್ರದಲ್ಲಿ ನೀರಿನ ಪರಿಮಾಣ ಕಡಿಮೆಯಾದಾಗ, ನಿಗದಿತ ಅವಧಿಯ ಪೂರ್ವದಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಬೇಕೆಂದು ಪ್ರತಿಭಟಿಸಿದಾಗ ಮೋಟಾರು ಗಳನ್ನು ಸ್ಥಗಿತಗೊಳಿಸಲಾಗುತ್ತೆದೆ.
ಪ್ರತಿಭಟನೆಗೆ ಮುಖ್ಯ ಕಾರಣ ನದಿಯ ನೀರಿನ ಲಭ್ಯತೆ, ಬೇಸಿಗೆಯಲ್ಲಿ ನೀರು ಬತ್ತಿಹೊಗುವುದರಿಂದ ಜೂನ್ ವರೆಗೆ ಜನ ಜಾನುವಾರುಗಳಿಗೆ ನೀರು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.
ಇದಲ್ಲದೆ, ೦ ಕಿ.ಮೀ ದಿಂದ ೬ ವರೆಗೆ ರೀಚನಲ್ಲಿಯ ಆಮ್ಲೀಯ ಮಣ್ಣಿನ ಪ್ರಭಾವದಿಂದಾಗಿ ಕೆರೆಗಳಿಗೆ ನೀರನ್ನು ಪೂರೈಸುವ ಸಂದರ್ಭದಲ್ಲಿ ಪೈಪಲೆನ್ ನಲ್ಲಿ ಸೋರಿಕೆ ಕಂಡುಬರುವುದರಿಂದ ಅವುಗಳನ್ನು ಗುತ್ತಿಗೆದಾರರು ದುರಸ್ತಿಗೊಳಿಸಿ ಮರು ಪ್ರಾರಂಭಿಸಲು ವಿಳಂಬವಾಗಿರುತ್ತೆದೆ. ಇದನ್ನು ಸರಿಪಡಿಸಲು ಪರ್ಯಾಯ ತಾಂತ್ರಿಕ ಸಾಧ್ಯ – ಸಾಧ್ಯತೆ ವ್ಯವಸ್ಥೆ ಯನ್ನು ಕಲ್ಪಿಸುವ ಕುರಿತು ಪ್ರಸ್ತಾವನೆಯನ್ನು ನಿಗಮದ ತಾಂತ್ರಿಕ ಉಪ ಸಮಿತಿಯ ಮುಂದೆ ಮಂಡಿಸಿ, ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕೃಷ್ಣಾ ಭಾಗ್ಯ ಜಲ ನಿಗಮದಡಿ ಅಗತ್ಯ ಕ್ರಮಗಳನ್ನು ಜರಗಿಸಲಾಗುವುದು ಎಂದು ಉತ್ತಿರಿಸಿದ್ದಾರೆ.